ಪ್ರಧಾನಿ ಮೋದಿ ಜೊತೆ ಸರ್ವಪಕ್ಷ ನಾಯಕರ ಮಾತುಕತೆ, ಸಂಸದ ಕ್ಯಾ.ಚೌಟ ಭಾಗಿ
ಪ್ರಧಾನಿ ಮೋದಿ ಅವರ ನಿವಾಸದಲ್ಲಿ ನಿನ್ನೆ ಆಪರೇಷನ್ ಸಿಂಧೂರ ನಂತರ ವಿವಿಧ ದೇಶಗಳಿಗೆ ತೆರಳಿದ್ದ ಸರ್ವಪಕ್ಷ ನಿಯೋಗ ಸದಸ್ಯರ ಜೊತೆ ಮಾತುಕತೆ ನಡೆಸಿದರು.
















ಈ ಸಂದರ್ಭದಲ್ಲಿ ರಾಯಭಾರಿ ಪ್ರತಿನಿಧಿಯಾಗಿ ತೆರಳಿದ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಈ ಸಭೆಯಲ್ಲಿ ಭಾಗವಹಿಸಿದ್ಧರು.

ಭಯೋತ್ಪಾದನೆ ವಿಚಾರದಲ್ಲಿ ಭಾರತದ ನಿಲುವನ್ನು ಜಗತ್ತಿನ ವಿವಿಧ ದೇಶಗಳಿಗೆ ತಿಳಿಸಿದ ಸಂಸದರಿಗೆ, ರಾಯಭಾರಿ ಪ್ರತಿನಿಧಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.










