ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಜಿಲ್ಲಾಮಟ್ಟದ ಯೋಗ ಸ್ಪರ್ಧೆ

0

ಗೂನಡ್ಕ: ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿ ಐ ಎಸ್ ಸಿ ಇ ನ್ಯಾಷನಲ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ 2025-26ರ ಮೊದಲ ಹಂತದ ದಕ್ಷಿಣ ಕನ್ನಡ ಹಾಗೂ ಉಡುಪಿ ಅಂತರ್ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ ಜೂನ್ 11 ರಂದು ಜರುಗಿತು.

ಸಂಸ್ಥೆಯ ಅಧ್ಯಕ್ಷರಾದ ರುಕ್ಮಯ್ಯದಾಸ್ ಕಾ‍ರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಂತರ್ ಜಿಲ್ಲಾ ವಲಯ ಮಟ್ಟದ ಕ್ರೀಡಾ ಸಂಯೋಜಕಿ ಹಾಗೂ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ಮಾತನಾಡಿ ಯೋಗವು ನಮ್ಮ ಭಾರತದ ಪ್ರಾಚೀನ ಕಲೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಯೋಗವು ಸಹಕಾರಿ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ ಭಾಗವಹಿಸುವಿಕೆ ಅತೀ ಅವಶ್ಯಕ ಎಂದರು.

ಈ ಸಮಾರಂಭದಲ್ಲಿ ರಾಷ್ಟ್ರೀಯ ಯೋಗ ತೀರ್ಪುಗಾರರಾದ ಶ್ರೀಮತಿ ಪ್ರಶ್ವೀಜ ಕೆ.ಎಸ್, ನವೀನ್ ಕುಮಾರ್ ಬಿ, ಹಾಗೂ ವಿಜೇಶ್ ಬೆಳಿನೆಲೆ, ಸಂಸ್ಥೆಯ ಅಧ್ಯಕ್ಷರಾದ ರುಕ್ಮಯ್ಯ ದಾಸ್, ನಿರ್ದೇಶಕರಾದ ಶ್ರೀಮತಿ ಲೀಲಾವತಿ ರುಕ್ಮಯ್ಯದಾಸ್, ಕಾರ್ಯದರ್ಶಿಗಳಾದ ಡಾ. ಕಿಶೋರ್ ಕುಮಾರ್, ಪ್ರಾಂಶುಪಾಲರಾದ ಶೋಭಾ ಕಿಶೋರ್, ಶಿಕ್ಷಕ- ಶಿಕ್ಷಕೇತರ ವೃಂದ ಹಾಗೂ ಯೋಗಪಟುಗಳು ಉಪಸ್ಥಿತರಿದ್ದರು