ಸಿ ಐ ಎಸ್ ಸಿ ಇ ನ್ಯಾಷನಲ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ 2025-26ರ ಮೊದಲ ಹಂತದ ದಕ್ಷಿಣ ಕನ್ನಡ ಹಾಗೂ ಉಡುಪಿ ಅಂತರ್ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಜೂನ್ 19 ರಂದು ಸಿಲಾಸ್ ಇಂಟರ್ನ್ಯಾಷನಲ್ ಸ್ಕೂಲ್ ಉಡುಪಿ ಶಾಲೆಯಲ್ಲಿ ಜರುಗಿತು.
ಈ ಸ್ಪರ್ಧೆಯಲ್ಲಿ ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ಹುಡುಗರ ವಿಭಾಗದ 17ರ ವಯೋಮಿತಿ ಕರಾಟೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಪ್ರಣವ್ ಎನ್ ಎಲ್ (8ನೇ ತರಗತಿ), ಮತ್ತು ಸ್ಕಂದ ಎ ಆರ್ (9ನೇ ತರಗತಿ) ಮತ್ತು 14ರ ವಯೋಮಿತಿ ಹುಡುಗರ ವಿಭಾಗದಲ್ಲಿ ಶ್ರೀಜಿತ್ ವೈ (7ನೇ ತರಗತಿ) ಇವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 14ರ ವಯೋಮಿತಿ ಹುಡುಗಿಯರ ವಿಭಾಗದಲ್ಲಿ ಯಶ್ಮಿತಾ ಎಂ(8ನೇ ತರಗತಿ) ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ ಹಾಗೂ 14ರ ವಯೋಮಿತಿ ಹುಡುಗರ ವಿಭಾಗದಲ್ಲಿ ಮಹಮ್ಮದ್ ಅಬೀದ್ ಕೆ ಎಸ್ (6ನೇ ತರಗತಿ) ಮತ್ತು ಮಹಮ್ಮದ್ ಅಸ್ಲಾಂ ಕೆ ಎಸ್. (8ನೇ ತರಗತಿ) ಇವರು ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಪ್ರಾಂಶುಪಾಲರು ತಿಳಿಸಿರುತ್ತಾರೆ. ಇವರಿಗೆ ನಮ್ಮ ಶಾಲೆಯ ಕರಾಟೆ ತರಬೇತುದಾರರಾದ ಚಂದ್ರಶೇಖರ ಕನಕಮಜಲುರವರು ತರಬೇತಿಯನ್ನು ನೀಡಿರುತ್ತಾರೆ.