ವಿನೋಬನಗರ : ವಿಶ್ವ ಯೋಗ ದಿನಾಚರಣೆ

0

ವಿವೇಕಾನಂದ ವಿದ್ಯಾಸಂಸ್ಥೆಗಳು ವಿನೋಬನಗರ ಮತ್ತು ಕ್ರೀಡಾ ಭಾರತಿ ಸುಳ್ಯ ಘಟಕ ಇದರ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ನಡೆಸಲಾಯಿತು.

ವಿಶ್ವ ಯೋಗ ದಿನಾಚರಣೆಯ ಮಹತ್ವವನ್ನು ವಿದ್ಯಾ ಸಂಸ್ಥೆಯ ಸಹಶಿಕ್ಷಕರಾದ ಆಶೀಷ್ ದೊಡ್ಡೇರಿ ತಿಳಿಸಿದರು.


ಕ್ರೀಡಾ ಭಾರತಿ ಸುಳ್ಯ ಘಟಕದ ಅಧ್ಯಕ್ಷರಾದ ವಸಂತ ಎ. ಸಿ ಶುಭ ಹಾರೈಸಿದರು.
ಬಳಿಕ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಕಿ ಶ್ರೀಮತಿ ಸುಮಿತಾ ಕಾಟೂರು ಮತ್ತು ವಿದ್ಯಾರ್ಥಿಗಳಿ೦ದ ಯೋಗ ಪ್ರದರ್ಶನ ನಡೆಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ/ಗೋಪಾಲಕೃಷ್ಣ ಕಾಟೂರು ಇವರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಗಿರೀಶ್ ಕುಮಾರ್ ಸ್ವಾಗತಿಸಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಜಯಪ್ರಸಾದ್ ಕಾರಿಂಜ ವಂದಿಸಿದರು.