ಕನಕಮಜಲು ಗ್ರಾಮ ಪಂಚಾಯತ್ ನಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ , 15ನೇ ಹಣಕಾಸು ಯೋಜನೆಯ ಹಾಗೂ ರಾಜ್ಯ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ” ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರಿಮತಿ ಶಾರದಾ ಉಗ್ಗಮೂಲೆ ಇವರ ಅಧ್ಯಕ್ಷತೆಯಲ್ಲಿ ಗ್ರಾ. ಪಂ.ಸಭಾಭವನದಲ್ಲಿ ಜೂ.21ರಂದು ಜರುಗಿತು. ಈ ಗ್ರಾಮಸಭೆಯ ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಇಲಾಖೆ ಸುಳ್ಯ ಇವರು ಉಪಾಸ್ಥಿತರಿದ್ದರು.








ಈ ಸಭೆಯಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ , 15ನೇ ಹಣಕಾಸು ಯೋಜನೆಯ ಹಾಗೂ ರಾಜ್ಯ ಹಣಕಾಸು ಯೋಜನೆಯಲ್ಲಿ ಅನುಷ್ಠಾನ ಗೊಳಿಸಿರುವ ಮಾಹಿತಿಯನ್ನು ನೀಡಲಾಯಿತು.
ಈ ಸಭೆಯಲ್ಲಿ ಗ್ರಾ. ಪಂ ಉಪಾಧ್ಯಕ್ಷರು, ಸದಸ್ಯರುಗಳು ತಾಲ್ಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರು, ಸಾಮಾಜಿಕ ಪರಿಶೊಧನಾ ತಂಡದವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಅಭಿಯಂತರರು ಗ್ರಾ.ಪಂ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರೋಜಿನಿ,ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.










