ಆರೋಪಿ ಸೀತಾರಾಮ ಪೂಜಾರಿಗೆ ನಿರೀಕ್ಷಣಾ ಜಾಮೀನು ಮಂಜೂರು

0

ಆರೋಪಿ ಸುಬ್ರಹ್ಮಣ್ಯದ ಆದರ್ಶ ವಿವಿಧೋದ್ದೇಶ ಸಹಕರ ಸಂಘದಲ್ಲಿ ದೂರುದಾರ ಗಣೇಶ್ ಹೆಚ್ ಎಲ್ ಇವರ ತಾಯಿ ಎಸ್.ಎನ್ ಶಾರದಮ್ಮನವರ ಹೆಸರಿನಲ್ಲಿ ಎರಡು ವರ್ಷದ ಅವಧಿಗೆ ಎಫ್ ಡಿ (ನಿರಖು ಠೇವಣಿ ) ಇರಿಸಲಾದ 50 ಲಕ್ಷ ಹಣವನ್ನು ಡೆಪಾಸಿಟ್ ದಾರರಿಗೆ ಹಿಂತಿರುಗಿಸದೆ ಠೇವಣಿದಾರರ ಪೋರ್ಜರಿ ಸಹಿಯನ್ನು ಮಾಡಿ ರೂ. 50 ಲಕ್ಷವನ್ನು ಡ್ರಾ ಮಾಡಿ ಸದರಿ ಬ್ಯಾಂಕಿನ ಆಗಿನ ಮ್ಯಾನೇಜರ್ ಸೀತಾರಾಮ ಪೂಜಾರಿಯವರು ದೂರುದಾರರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆರೋಪಿಯ ವಿರುದ್ಧ ಠೇವಣಿದಾರರ ಮಗ ಗಣೇಶ ಹೆಚ್. ಏಲ್ ಎಂಬುವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರೊಂದನ್ನು ದಿನಾಂಕ 7-4-2025 ರಂದು ನೀಡಿದ್ದು ಸದರಿ ದೂರಿನ ಅನ್ವಯ ಆರೋಪಿ ಸೀತಾರಾಮ ಪೂಜಾರಿಯವರ ವಿರುದ್ಧ ಮೋಸ ವಂಚನೆ ಹಾಗೂ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಕೇಸು ದಾಖಲಾಗಿರುತ್ತದೆ.

ಪ್ರಕರಣದ ಆರೋಪಿ ಸೀತಾರಾಮ ಪೂಜಾರಿಯವರು ಮಾನ್ಯ ಐದನೇ ಹೆಚ್ಚುವರಿ ಸೆಶನ್ ನ್ಯಾಯಾಲಯ ಪುತ್ತೂರು ಇಲ್ಲಿ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದು ಆರೋಪಿ ಸೀತಾರಾಮ ಪೂಜಾರಿಯವರಿಗೆ ಶರ್ತ ಬದ್ಧ ಮುಂಗಡ ಜಾಮೀನನ್ನು ನೀಡಿ ಮಾನ್ಯ ಪುತ್ತೂರು ಜಿಲ್ಲಾ ನ್ಯಾಯಾಲಯವು ದಿನಾಂಕ 17/6/2025ರಂದು ಆದೇಶವನ್ನು ಮಾಡಿರುವುದಾಗಿದೆ.


ಆರೋಪಿಯ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ. ಹಾಗೂ ಶ್ಯಾಮ್ ಪ್ರಸಾದ್ ನಿಡ್ಯಮಲೆ ವಾದಿಸಿದ್ದರು.