ನಾರಾಲು ಜನರ ಸಮಸ್ಯೆಗೆ ಮೆಸ್ಕಾಂ ಸ್ಪಂದನೆ : ಹೊಸ ಟಿ.ಸಿ. ಅಳವಡಿಕೆ

0

ಅಜ್ಜಾವರ ಗ್ರಾಮದ ನಾರಾಲು ವ್ಯಾಪ್ತಿಯಲ್ಲಿ ಹೊಸ ಟಿಸಿ ಅಳವಡಿಕೆ ಮಾಡಿರುವ ಮೆಸ್ಕಾಂ ಇಲಾಖೆ ಜನರ ಬೇಡಿಕೆಗೆ ಸ್ಪಂದನೆ ಮಾಡಿದೆ.

ಅಜ್ಜಾವರದ ಕುಂಟಿಕಾನ ಕಡೆ 3 ಫೇಸ್ ಇಲ್ಲದೆ ಕುಡಿಯುವ ನೀರಿಗೆ ಸಮಸ್ಯೆ ಇತ್ತು ಹಲವು ಬಾರಿ ಮೆಸ್ಕಾಂ ಸಿಬ್ಬಂದಿಗಳ ಗಮನಕ್ಕೆ ತಂದರು ಸಮಸ್ಯೆ ಪರಿಹಾರ ಆಗಿರಲಿಲ್ಲ. ಈ ಸಮಸ್ಯೆಯನ್ನು ನಾರಾಲು ಭಾಗದ ಜನರು ಸುಳ್ಯ ಸುದ್ದಿ ವರದಿಗಾರರ ಗಮನಕ್ಕೆ ತಂದರು. ಸುದ್ದಿ ವತಿಯಿಂದ ಮೆಸ್ಕಾಂ ಇಂಜಿನಿಯರ್ ಸುಪ್ರೀತ್ ರಿಗೆ ಸಮಸ್ಯೆ ವಿವರಿಸಲಾಯಿತು.

ಇದಾದ 2 ದಿನದಲ್ಲಿ ನಾರಾಲಿನಲ್ಲಿ ಹೊಸ ಟಿಸಿ ಅಳವಡಿಸಿ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ