ಮಲ್ಲಾರ ಬಳಿ ಮುರಿದು ಬಿದ್ದ ಮರ

0

ಪಿಕಪ್ ನಲ್ಲಿದ್ದವರು ಪವಾಡ ಸದೃಶ್ಯರಾಗಿ ಪಾರು

ಹರಿಹರ ಪಲ್ಲತಡ್ಕ ಗ್ರಾಮದ ಮಲ್ಲಾರ ಎಂಬಲ್ಲಿ ಜೂ.24 ರಂದು ಬೆಳಗ್ಗೆ ಮಲ್ಲಾರ ಬಳಿ ದೂಪದ ಮರವೊಂದು ಮುರಿದು ಬಿದ್ದು ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ನಲ್ಲಿದ್ದವರು ಪವಾಡ ಸದೃಶ್ಯರಾಗಿ ಪಾರಾದ ಘಟನೆ ವರದಿಯಾಗಿದೆ.

ರಸ್ತೆ ಬದಿ ನಿಲ್ಲಿಸಿದ ಪಿಕಪ್ ಮೇಲೆ ಮರ ಬಿದ್ದಿದ್ದು ಈ ಸಂದರ್ಭ ಅದರಲ್ಲಿ ಎರಡು ಜನ ಇದ್ದರೆನ್ನಲಾಗಿದೆ. ಪಿಕಪ್ ಗೂ ಡ್ಯಾಮೇಜ್ ಆಗಿದ್ದು ಅದರಲ್ಲಿ ಇದ್ದವರಿಗೆ ಏನೂ ಆಗದಿರುವುದು ದೇವರೆ ಕಾಪಾಡಿದಂತಾಗಿದೆ. ಮರ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.