ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ- ಸಾರ್ವಜನಿಕ ಸತ್ಯನಾರಾಯಣ ಪೂಜೆ

0

ಕಾರ್ಯಕಾರಿ ಸಮಿತಿ ರಚನೆ: ಅಧ್ಯಕ್ಷ- ವೆಂಕಟ್ರಮಣ ಬಿ, ಕಾರ್ಯದರ್ಶಿ-ಸಂಜಯ್ ಎನ್,ಖಜಾಂಜಿ-ವಿಜಯ್ ಕುಮಾರ್

ಸುಳ್ಯತಾಲೂಕು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಹಾಗೂ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜೂ. 15 ರಂದು ಕೇರ್ಪಳ ಶ್ರೀದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.
ಬೆಳಗ್ಗೆ ಮರ್ಕಂಜ ಶ್ರೀ ಭಗವತೀ ಭಜನಾ ಮಂಡಳಿಯವರಿಂದ ಭಜನಾ ಸೇವೆಯು ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ವಾರ್ಷಿಕ ಮಹಾಸಭೆ:

ಸಂಘದ ಅಧ್ಯಕ್ಷ ಚಂದ್ರಶೇಖರ್ ಪನ್ನೆ ಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ನಡೆಯಿತು. ಅತಿಥಿಗಳಾಗಿ ಸಂಘದ ಗೌರವ ಸಲಹೆಗಾರರಾದ ಶಂಕರ ಪಾಟಾಳಿ ಮುಕ್ರಂಪಾಡಿ, ವೆಂಕಟ್ರಮಣ ಬೇರ್ಪಡ್ಕ ,ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ಕೆ. ನಾರಾಯಣ, ನಿವೃತ್ತ ಪ್ರಾಂಶುಪಾಲರಾದ ಅಪ್ಪು ಪಾಟಾಳಿ ಜಯನಗರ, ಆಂತರಿಕ ಲೆಕ್ಕ ಪರಿಶೋಧಕರಾದ ಮಹಾಲಿಂಗನ್ ಬಾಜರ್ತೊಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೇವಾ ನಿವೃತ್ತಿಯನ್ನು ಹೊಂದಿದ ಅಪ್ಪು ಜಯನಗರ ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಅಭಿಷೇಕ್ ಅಡ್ಕಾರ್ (ಪೋಲಿಸ್)ರವರನ್ನು
ಸನ್ಮಾನಿಸಲಾಯಿತು.

ಸಂಘದ 11 ಮಂದಿ ಅನಾರೋಗ್ಯ ಪೀಡಿತ ಸದಸ್ಯರಿಗೆ ಆರೋಗ್ಯ ನಿಧಿ ವಿತರಿಸಲಾಯಿತು.
ಎಸ್. ಎಸ್. ಎಲ್. ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರನೀಡಲಾಯಿತು

ಮುಂದಿನ 2025-26ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿವೆಂಕಟ್ರಮಣ ಬೇರ್ಪಡ್ಕ,ಉಪಾಧ್ಯಕ್ಷರಾಗಿಸುಖೇಶ್ಅಡ್ಕಾರ್, ಕಾರ್ಯದರ್ಶಿ ಸಂಜಯ್ ನೆಟ್ಟಾರ್, ಕೋಶಾಧಿಕಾರಿ ವಿಜಯ್ ಕುಮಾರ್ ಎರ್ಮೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಮತಿ ಸೌಮ್ಯ ರಮೇಶ್ ಇರಂತಮಜಲು, ಸಂಘಟನಾ ಕಾರ್ಯದರ್ಶಿ ನಿತೀಶ್ ಎರ್ಮೆಟ್ಟಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಾಲಿಂಗನ್ ಬಾಜರ್ತೊಟ್ಟಿ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಕೆ ನಾರಾಯಣ ರವರನ್ನು ಆಯ್ಕೆಮಾಡಲಾಯಿತು.

ಕಾರ್ಯದರ್ಶಿ ಸಚಿತ್ ಕಲ್ಮಡ್ಕ ಸ್ವಾಗತಿಸಿ, ವರದಿ ವಾಚಿಸಿದರು.ಕೋಶಾಧಿಕಾರಿ ವಿಜಯ್ ಕುಮಾರ್ ಎರ್ಮೆಟ್ಟಿ ಲೆಕ್ಕಪತ್ರ ಮಂಡಿಸಿದರು.ಶ್ರೀಮತಿ ಸೌಮ್ಯ ರಮೇಶ್ ಇರಂತಮಜಲು, ನಿತೀಶ್ ಎರ್ಮೆಟ್ಟಿ ಸನ್ಮಾನ ಪತ್ರ ವಾಚಿಸಿದರು, ಸುರೇಶ್ ಕರ್ಲಪ್ಪಾಡಿ ವಂದಿಸಿದರು, ಪ್ರವೀಣ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.

ಮೇ. 25ರಂದು ಸುಳ್ಯ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ “ಕ್ರೀಡಾ ಸಂಭ್ರಮ -2025″ರ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಗೊಂಡಿತು.