














ಸುಳ್ಯದ ರಥಬೀದಿಯ ವಿನಾಯಕ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ 3ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಗಣಪತಿ ಹವನ ಮತ್ತು ಲಕ್ಷ್ಮೀಪೂಜೆ ಜೂ. 29ರಂದು ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಅಧ್ಯಕ್ಷರಾದ ಜನಾರ್ಧನ ಧೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ, ನಿರ್ದೇಶಕರಾದ ಪ್ರಕಾಶ್ ಕೇರ್ಪಳ, ಸಚಿನ್ ಕುಮಾರ್ ಬಳ್ಳಡ್ಕ, ಶ್ರೀಮತಿ ಭವಾನಿ ಬಿಳಿಮಲೆ, ಕೇಶವ ನಾಯಕ್, ಚಿದಾನಂದ ವಿದ್ಯಾನಗರ, ಸತೀಶ್ ಪರಿವಾರಕಾನ, ಶರತ್ ಕಲ್ಲುಗುಂಡಿ, ಚಿದಾನಂದ ಪರಿವಾರಕಾನ, ಕರುಣಾಕರ ಕುದ್ಪಾಜೆ ಸಿಬ್ಬಂದಿ ಕು. ಜ್ಯೊತ್ಸ್ನಾ ಮಂದ್ರಪ್ಪಾಡಿ, ಮತ್ತಿತರರು ಉಪಸ್ಥಿತರಿದ್ದರು. ಪುರೋಹಿತರಾದ ಪ್ರವೀಣ್ ಮಾವಾಜಿಯವರ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು.










