ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ವಲಯದ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆ ಹಾಗೂ ಅಭಿನಂದನಾಕಾರ್ಯಕ್ರಮವು ಜೂ.29 ರಂದು ಸುಳ್ಯಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಿತು.















ಈ ಸಂದರ್ಭದಲ್ಲಿ
ವಿಶಿಷ್ಟ ಶ್ರೇಣಿಯಲ್ಲಿ ಎಸ್.ಎಸ್.ಎಲ್.ಸಿ.
ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.
ಪಿಯುಸಿ ವಿಭಾಗದಲ್ಲಿ ಕೌಶಿಕ್ (548), ಹರ್ಷಿತ (591) ನವೀನ (516) ಹಾಗೂಎಸ್. ಎಸ್. ಎಲ್. ಸಿ ವಿಭಾಗದಲ್ಲಿ ದೀಪಶ್ರೀ (612), ಅನುಷ್ (505), ಅಭಿಷೇಕ್ (535) ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಯೋಜನಾಧಿಕಾರಿ ಮಾಧವ ಗೌಡ ರವರು ಅಭಿನಂದಿಸಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಸಂಘದ ನಿರ್ವಹಣೆಯ ಹಾಗೂ
ಸಂಪೂರ್ಣ ಸುರಕ್ಷಾ ಯೋಜನೆಯ ಸೌಲಭ್ಯಗಳ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷ ಮನೋಹರ್ ಅಧ್ಯಕ್ಷತೆ ವಹಿಸಿದ್ದರು.
ವಲಯ ಮೇಲ್ವಿಚಾರಕ ದಿನೇಶ್ .ಡಿ, ಸೇವಾ ಪ್ರತಿನಿಧಿ ಸೌಜನ್ಯ, ಒಕ್ಕೂಟದ ಉಪಾಧ್ಯಕ್ಷ ಮೋಹನ್ ರೈ, ಇಂದಿರಾ, ದಾಖಲಾತಿ ಸಮಿತಿ ಸದಸ್ಯರು, ಕಾರ್ಯಕ್ಷೇತ್ರದ ಎಲ್ಲಾ ಸಂಘದ ಪ್ರಬಂಧಕರು, ಸಂಯೋಜಕರು, ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ತ್ರೈಮಾಸಿಕ ಸಭೆಯಲ್ಲಿ ಒಟ್ಟು 180 ಮಂದಿ ಸದಸ್ಯರುಪಾಲ್ಗೊಂಡಿದ್ದರು. ಅನಿತಾ ಸ್ವಾಗತಿಸಿ, ಪ್ರೇಮಾ ವಂದಿಸಿದರು. ರಂಜಿನಿ ಕೆ .ಎಸ್ ಕಾರ್ಯಕ್ರಮ ನಿರೂಪಿಸಿದರು.










