Home ಪ್ರಚಲಿತ ಸುದ್ದಿ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ ದಿನೇಶ್ ಮಡ್ತಿಲ ಅಧಿಕಾರ ಸ್ವೀಕಾರ

ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ ದಿನೇಶ್ ಮಡ್ತಿಲ ಅಧಿಕಾರ ಸ್ವೀಕಾರ

0

ಐಟಿಐ ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ : ಡಾ.ರೇಣುಕಾಪ್ರಸಾದ್ ಕೆ.ವಿ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’
ಇದರ ಆಡಳಿತಕ್ಕೊಳಪಟ್ಟ ಕೆವಿಜಿ ಐಟಿಐ ಯ ನೂತನ ಪ್ರಾಂಶುಪಾಲರಾಗಿ ದಿನೇಶ್ ಮಡ್ತಿಲರವರು ಜು.2 ರಂದು ಅಧಿಕಾರ ಸ್ವೀಕರಿಸಿದರು.
ಉಪಪ್ರಾಂಶುಪಾಲರಾಗಿ ಶ್ರೀಮತಿ ಗುಣರತ್ನರವರು ಅಧಿಕಾರ ಸ್ವೀಕರಿಸಿದರು.


ಎ.ಓ.ಎಲ್.ಇ ಕಮಿಟಿ ‘ಬಿ’ ಇದರ ಚೇರ್ ಮೆನ್ ಡಾ.ರೇಣುಕಾಪ್ರಸಾದ್ ಕೆ.ವಿ.ಯವರು ದಿನೇಶ್ ಮಡ್ತಿಲ ಮತ್ತು ಶ್ರೀಮತಿ ಗುಣರತ್ನರವರಿಗೆ ಪದೋನ್ನತಿಯ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿ ಐಟಿಐ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿ ನೂತನ ಪ್ರಾಂಶುಪಾಲರಿಗೆ ಹಾಗೂ ಉಪಪ್ರಾಂಶುಪಾಲರಿಗೆ ಶುಭಹಾರೈಸಿದರು.
ಕಾರ್ಯದರ್ಶಿ ಜ್ಯೋತಿ ಆರ್.ಪ್ರಸಾದ್ ರವರು ಶುಭಹಾರೈಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಕೆ.ವಿ.ಜಿ.ಡೆಂಟಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಮೌರ್ಯ ಆರ್ ಕುರುಂಜಿ,ಗವರ್ನಿಂಗ್ ಕೌನ್ಸಿಲ್ ಸದಸ್ಯರುಗಳಾದ ದೀಪಕ್ ಕುತ್ತಮೊಟ್ಟೆ,ದಯಾನಂದ ಕುರುಂಜಿ,ಹಾಗೂ ಪ್ರಸನ್ನ ಕಲ್ಲಾಜೆ,ನಿವೃತ್ತ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲ,ನಿವೃತ್ತ ಕಚೇರಿ ಅಧೀಕ್ಷಕ ಭವಾನಿಶಂಕರ ಅಡ್ತಲೆ,ಹಿರಿಯ ಎಜೆಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋಧ ರಾಮಚಂದ್ರ,ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್,ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಅಣ್ಣಯ್ಯ, ಕೆವಿಜಿ ಐಪಿಎಸ್ ಪ್ರಾಂಶುಪಾಲರಾದ ಅರುಣ್ ಕುಮಾರ್,ಭಾಗಮಂಡಲ ಐಟಿಐ ಪ್ರಾಂಶುಪಾಲ ಶ್ರೀಕಾಂತ್ ಕೆ,ವಿ, ಉಪಪ್ರಾಂಶುಪಾಲರುಗಳಾದ ಶ್ರೀಧರ್,ಹರೀಶ್ ಕೆ,ದೀಪಕ್,ಶಿಲ್ಪಾ ಬಿದ್ದಪ್ಪ, ಹಾಗೂ ಕಾಲೇಜು ಆಡಳಿತಾಧಿಕಾರಿಗಳಾದ ಬಿ.ಟಿ.ಮಾಧವ,ನಾಗೇಶ್ ಕೊಚ್ಚಿ,ಕಚೇರಿ ಮುಖ್ಯಸ್ಥರುಗಳಾದ ಧನಂಜಯ ಕಲ್ಲುಗದ್ದೆ,ಪದ್ಮನಾಭ ಕೆ,ಯತೀಶ್,ವಸಂತ ಕಿರಿಭಾಗ ಹಾಗೂ ಕೆವಿಜಿ ಸೌಹಾರ್ದ ಸಹಕಾರಿ ಸಂಘದ ಮುಖ್ಯಸ್ಥರುಗಳಾದ ಉಮೇಶ್ ,ಕರುಣಾಕರ,ಅಮರಜ್ಯೋತಿ ಪ್ರಿಂಟಿಂಗ್ ಪ್ರೆಸ್ ನ ನಾಗವೇಣಿ,ಉಮಾವತಿ ,ದಯಾನಂದ ಹಾಗೂ ಎಓಎಲ್ ಇ ಕಚೇರಿಯ ಸ್ವಾತಿ ಮಡಪ್ಪಾಡಿ, ಗಣೇಶ,ವಿನೀತ್ ಮೋಹನ್,ಸ್ವಸ್ತಿಕ್, ಕೆವಿಜಿ ಪಾಲಿಟೆಕ್ನಿಕ್ ನ ಅರುಣ್ ಕುರುಂಜಿ,ದಿನೇಶ್ ಕೆವಿಜಿ ಅಕಾಡೆಮಿ ಲೆಕ್ಕಪತ್ರ ವಿಭಾಗದ ಬಾಲಸುಬ್ರಹ್ಮಣ್ಯ,ಅನಿತ,ರೇಣುಕಾ ,ಶಶಿಧರ,ಮಂಜುನಾಥ ಮುತ್ಲಾಜೆ ಹಾಗೂ ಕೆವಿಜಿ ಗ್ರೂಪ್ ಆಫ್ ಹಾಸ್ಟೆಲ್ ನ ಸಿಬ್ಬಂದಿ ವರ್ಗದವರು ಹಾಗೂ ಐಟಿಐನ ಉಪನ್ಯಾಸಕ ವರ್ಗದವರು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking