ಭಾರತೀಯ ಭೂಸೇನೆಯ ನಿವೃತ್ತ ಯೋಧ ಧನಂಜಯ ಬಾಳುಗೋಡು ನಿಧನ

0

ಬಾಳುಗೋಡು ಗ್ರಾಮದ, ಭಾರತೀಯ ಭೂಸೇನೆಯ ನಿವೃತ್ತ ಯೋಧ ಧನಂಜಯ ಬಾಳುಗೋಡುರವರು
ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ಜೂ. 2 ರಂದು ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಭಾರತೀಯ ಭೂ ಸೇನೆಯಲ್ಲಿ ಸುಮಾರು 18 ವರ್ಷಗಳ ಸೇವೆಗೈದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರು. ಪ್ರಸ್ತುತ ಮಂಗಳೂರಿನ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರು.

ಮೃತರು ಪತ್ನಿ, ನಿವೃತ್ತ ಸಿ.ಆರ್. ಪಿ. ಎಫ್. ಉದ್ಯೋಗಿ ಯಶೋಧ, ಪುತ್ರರಾದ ಶೃಜನ್, ಹಾರ್ದಿಕ್, ಸಹೋದರರು, ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ