ಪಂಜ ಸಮೀಪದ ಕರಿಕ್ಕಳ ಗಾಳಿಕೂಪು ಬಸ್ ತಂಗುದಾಣದ ಮೇಲೆ ಮತ್ತು ವಿದ್ಯುತ್ ಲೈನ್ ಮೇಲೆ ಗಾಳಿ ಮಳೆಗೆ ಮರ ಉರುಳಿ ಬಿದ್ದು ಅಪಾರ ಹಾನಿಯಾದ ಘಟನೆ ಜು3. ರಂದು ವರದಿಯಾಗಿದೆ.









ಬಸ್ ತಂಗುದಾಣ ಸಂಪೂರ್ಣ ಹಾನಿಯಾಗಿದೆ. ಪಕ್ಕದಲ್ಲಿದ್ದ 33 ಕೆ ವಿ ವಿದ್ಯುತ್ ಕಂಬ ಮುರಿದಿದ್ದು ಲೈನ್ ಗೆ ಹಾನಿಯಾಗಿದೆ. ಅದೃಷ್ಟವಶ ಮುಂಜಾನೆ ವೇಳೆ ಮರ ಬಿದ್ದ ಕಾರಣ ಅಪಾಯ ತಪ್ಪಿದೆ. ಸ್ಥಳಕ್ಕೆ ಪಂಜ ಮೆಸ್ಕಾಂ ಇಲಾಖೆಯ ಜೆ ಇ ಬಾಲಕೃಷ್ಣ, ಪಂಜ ಗ್ರಾಮ ಪಂಚಾಯತ್ ಪಿ ಡಿ ಒ ಜಯಂತ್ ಯು ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










