ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ವಿಚಾರ : ಐವರು ವೀಕ್ಷಕರನ್ನು ನೇಮಿಸಿ ಕೆಪಿಸಿಸಿ ಆದೇಶ

0

ಜು.8ರಂದು ಸುಳ್ಯದಲ್ಲಿ ಅಭಿಪ್ರಾಯ ಸಂಗ್ರಹ ಸಭೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಸಂಬಂಧ ಎದ್ದಿರುವ ಗೊಂದಲಗಳ ನಿವಾರಣೆಗಾಗಿ ಕೆಪಿಸಿಸಿ ಐವರು ವೀಕ್ಷಕರನ್ನು ನೇಮಕ ಮಾಡಿದ್ದು, ಆ ವೀಕ್ಷಕರು ಜು.8ರಂದು ಸುಳ್ಯಕ್ಕೆ ಆಗಮಿಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆಂದು ತಿಳಿದುಬಂದಿದೆ.

ಕೆಪಿಸಿಸಿ ನೇಮಕ ಮಾಡಿದ ವೀಕ್ಷಕರ ತಂಡದಲ್ಲಿ ಕೆಪಿಸಿಸಿ ಉಪಾಧ್ಯಕ್ಷರುಗಳಾದ ವಿ.ಆರ್. ಸುದರ್ಶನ್, ಎಂ. ನಾರಾಯಣ ಸ್ವಾಮಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಗೇರು ನಿಗಮದ ಅಧ್ಯಕ್ಷೆ ಮಮತ ಶೆಟ್ಟಿ ಯವರು ಒಳಗೊಂಡಿದ್ದಾರೆ.

ಇವರೆಲ್ಲ ಜು.8ರಂದು ಸುಳ್ಯಕ್ಕೆ ಬಂದು ವೀಕ್ಷಕರು ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.

ಸಭೆಗೆ ಈ ಕ್ಷೇತ್ರದ 2023ರ ವಿಧಾನಸಭಾ ಅಭ್ಯರ್ಥಿ, ಲೋಕಸಭಾ ಅಭ್ಯರ್ಥಿ, ಜಿಲ್ಲೆಯ ಹಿರಿಯ ನಾಯಕರುಗಳು ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಬ್ಲಾಕ್ ಅಧ್ಯಕ್ಷರು ಹಾಗೂ ಎಲ್ಲಾ ಮುಂಚೂಣಿ ಘಟಕ, ವಿಭಾಗ/ಸೆಲ್ ಮುಖ್ಯಸ್ಥರು, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳನ್ನು ಆಹ್ವಾನಿಸಬೇಕು. ಈ ಸಭೆಯಲ್ಲಿ ಎಲ್ಲದೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ನಲ್ಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ನಿರ್ದೇಶಿಸಿರುತ್ತಾರೆಂದು ತಿಳಿದುಬಂದಿದೆ.