ಜು.11ರಿಂದ ಆರಂಭ : ಶಹೀದ್ ಪಾರೆ ಮನವಿಗೆ ಆರೋಗ್ಯ ಸಚಿವರ ಸ್ಪಂದನೆ
ಜು.11ರಿಂದ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವವರಿಗೆ ಇಡ್ಲಿ, ಸಾಂಬಾರ್ ನೀಡಲು ನಿರ್ಧರಿಸಲಾಗಿದೆ.















ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಬೆಳಗ್ಗಿನ ಉಪಹಾರವಾಗಿ ಬ್ರೆಡ್ ನೀಡಲಾಗುತ್ತಿದ್ದು ಇದನ್ನು ಬದಲಾಯಿಸಿ ಇಡ್ಲಿ, ಸಾಂಬಾರು ನೀಡಬೇಕೆಂದು ಆಸ್ಪತ್ರೆಯ ಆರೋಗ್ಯ ರಕ್ಷಾಸಮಿತಿ ಸದಸ್ಯ ಶಹೀದ್ ಪಾರೆ ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಆರೋಗ್ಯ ರಕ್ಷಾಸಮಿತಿ ಸಭೆಯಲ್ಲಿಯೂ ಚರ್ಚಿಸಲಾಗಿತ್ತು.
ಈ ಮನವಿಗೆ ಸ್ಪಂದನೆ ನೀಡಿರುವ ಆರೋಗ್ಯ ಸಚಿವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿ, ಅಗತ್ಯಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ನಮ್ಮ ಮನವಿಗೆ ಸಚಿವರು ಸ್ಪಂದನೆ ನೀಡಿದ್ದು ಜು.11 ರಿಂದ ಬೆಳಗ್ಗೆಯಿಂದ ಆಸ್ಪತ್ರೆಯ ಒಳ ರೋಗಿಗಳಿಗೆ ಇಡ್ಲಿ, ಸಾಂಬಾರ್ ನೀಡಲಾಗುತ್ತದೆ ಎಂದು ಆರೋಗ್ಯ ರಕ್ಷಾಸಮಿತಿ ಸದಸ್ಯ ಶಹೀದ್ ಪಾರೆ ಸುದ್ದಿಗೆ ತಿಳಿಸಿದ್ದಾರೆ.










