ಸುಳ್ಯದ ಕೆಲ ರೋಚಕ ಮತ್ತು ವಿಶಿಷ್ಟವಾದ ಸ್ಥಳಗಳ ವೈಶಿಷ್ಟ್ಯ ಮತ್ತು ಇತಿಹಾಸಗಳ ಬಗ್ಗೆ ವಿಡಿಯೋ ದಾಖಲೆ ಮಾಡಲು ʼಎಸ್.ಜಿ ಮಲೆನಾಡುʼ ಎಂಬ ಖ್ಯಾತ ಸಾಮಾಜಿಕ ಜಾಲತಾಣ ನಡೆಸುತ್ತಿರುವ ಸುಮಂತ್ ಗೌಡ ಸುಳ್ಯಕ್ಕೆ ಎರಡು ದಿನಗಳ ಚಿತ್ರೀಕರಣಕ್ಕೆ ಇಂದು(ಜು.10) ಆಗಮಿಸಿದ್ದಾರೆ.















ʼನನ್ನ ಪ್ರಯಾಣದ ಕೌತುಕ ಕಥೆಗಳು ನಿಮ್ಮ ಜೊತೆʼ ಅಡಿಬರಹದ ಜೊತೆಗೆ ತೆರೆಮರೆಯಲ್ಲಿ ಮರೆಯಾದ ಹಲವು ಕೌತುಕದ ಸ್ಥಳ ಮತ್ತು ವಿಷಯಗಳ ಅನಾವರಣ ಮಾಡುತ್ತಿರುವ ಇವರು ಅಮರ ಸುಳ್ಯದ ಇತಿಹಾಸದ ಬಗ್ಗೆ ಜಗತ್ತಿಗೆ ತಿಳಿಸಲಿದ್ದಾರೆ.
ಎಸ್.ಜಿ ಮಲೆನಾಡು ಎಂಬ ಇನ್‌ಸ್ಟಾಗ್ರಾಂ ಪೇಜ್ 665 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದು, ಸುಮಾರು 624 ವಿಭಿನ್ನ ಕೌತುಕದ ಕಥೆಗಳನ್ನು ಒಳಗೊಂಡಿದೆ.
ಸುಳ್ಯದ ಕಲಾವಿದರು ಮತ್ತು ಜನರು ಇವರನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ಇವರು ಲೈಫ್ ಟೈಮ್ ಯ್ಯೂಟೂಬರ್ ಆಗಿದ್ದಾರೆ.










