ಸುಳ್ಯ ಎನ್ನೆoಪಿಯುಸಿಯಲ್ಲಿ ಮಾಹಿತಿ ಕಾರ್ಯಕ್ರಮ

0

ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಾಣಿಜ್ಯ ಸಂಘ ಮತ್ತು ಮಾನವಿಕ ಸಂಘದ ವತಿಯಿಂದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆ ಜಾಗೃತಿ ಮತ್ತು ಶಿಕ್ಷಣ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವನ್ನು ಜು. 10ರಂದು ಹಮ್ಮಿಕೊಳ್ಳಲಾಯಿತು.


ಮೋತಿಲಾಲ್ ಒಸ್ವಾಲ್ ಕಂಪೆನಿಯ ಬಿಸಿನೆಸ್ ಪಾರ್ಟ್ನರ್ ಮೋಹಿತ್ ಎ.ಎಸ್ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಲ.ಬಿ, ಮಾನವಿಕ ಸಂಘದ ಸಂಚಾಲಕಿ ರೇಷ್ಮಾ ಎಂ.ಎಂ, ವಾಣಿಜ್ಯ ಸoಘದ ಸಂಚಾಲಕಿ ಹರ್ಷಿತ ಎ.ಬಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶರಣ್ಯ ಮತ್ತು ಸಿಂಚನ ಪ್ರಾರ್ಥಿಸಿದರು. ವಾಣಿಜ್ಯ ಸಂಘದ ಸಂಚಾಲಕಿ ಹರ್ಷಿತ ಎ.ಬಿ ಸ್ವಾಗತಿಸಿ, ವಿದ್ಯಾರ್ಥಿನಿ ತನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸಾವಿತ್ರಿ ಕೆ ವಂದಿಸಿದರು. ಬೋಧಕ, ಬೋಧಕೇತರ ವೃಂದ, ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.