ಸ್ವರ್ಣಲತಾ ಮುಳ್ಯ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

0

ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) 2025ರಲ್ಲಿ ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ಸ್ (ಸಿ.ಎ) ಪರೀಕ್ಷೆಯಲ್ಲಿ ಸುಳ್ಯದ ಮುಳ್ಯ ನಿವಾಸಿ ಸ್ವರ್ಣಲತಾ ಎಂ. ಉತ್ತೀರ್ಣರಾಗಿದ್ದಾರೆ.

ವೆಂಕಟ್ರಮಣ ಮುಳ್ಯ – ಸುಮಿತ್ರಾ ಎಂ. ದಂಪತಿಯ ಪುತ್ರಿಯಾದ ಸ್ವರ್ಣಲತಾ, ಮುಳ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಕೆ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು , ರೋಟರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪೂರೈಸಿದ್ದು, ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದರು.

ಮಂಗಳೂರಿನ ತೃಶಾ ಕೋಚಿಂಗ್ ಸೆಂಟರ್ ನಲ್ಲಿ ಸಿಎ ಐಪಿಸಿಸಿ ಗ್ರೂಪ್ 1 ಹಾಗೂ ಬೆಂಗಳೂರಿನ ಯಶಸ್ ಕೋಚಿಂಗ್ ಸೆಂಟರ್ ನಲ್ಲಿ ಗ್ರೂಪ್ 2 ಕೋಚಿಂಗ್ ಪಡೆದಿದ್ದರು. ಬೆಂಗಳೂರಿನ ಮಲ್ಯ & ಮಲ್ಯ ಚಾರ್ಟರ್ಡ್ ಅಕೌಂಟ್ಸ್ ನಲ್ಲಿ ಆರ್ಟಿಕಲ್ ಶಿಪ್ ನಿರ್ವಹಿಸಿದ್ದರು. ಸಿಎ ಅಂತಿಮ ಕೋಚಿಂಗ್ ನ್ನು ನಾರ್ತ್ ಇಂಡಿಯಾ ಪ್ಯಾಕಲ್ಟೀಸ್ ನಿಂದ ಆನ್ ಲೈನ್ ಮೂಲಕ ಪಡೆದಿದ್ದರು.