ಮೆಸ್ಕಾಂ ಇಲಾಖೆಯ ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ವಿಭಾಗದ ಗ್ರಾಹಕರ ಸಲ ಹಾಸಮಿತಿ ಸದಸ್ಯರ ಸಭೆಯು ಗುತ್ತಿಗಾರಿನ ಮೆಸ್ಕಾಂ ಕಚೇರಿಯಲ್ಲಿ ನಡೆಯಿತು.









ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯದ ಮೆಸ್ಕಾಂ ಅಧಿಕಾರಿಗಳು ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯದ ಮೆಸ್ಕಾಂನ ಅಧಿಕಾರಿಗಳು ಹಾಗೂ ಗುತ್ತಿಗಾರು ಮೆಸ್ಕಾಂ ಜೆಇ ಲೋಕೇಶ್ ಎಣ್ಣೆಮಜಲು ಸೇರಿದಂತೆ ಗ್ರಾಹಕರ ಸಲಹಾ ಸಮಿತಿಯ ಸದಸ್ಯರುಗಳಾದ ದಿನೇಶ್ ಹಾಲೆಮಜಲು, ಗಣೇಶ್ ಚಾರ್ಮತ, ಪುರುಷೋತ್ತಮ ಮುಂಡೋಡಿ, ದಿನೇಶ್ ಸರಸ್ವತಿ ಮಾಲ್, ಶ್ರೀಮತಿ ಹೇಮಾವತಿ ದೇರಪ್ಪಜ್ಜನ ಮನೆ ಉಪಸ್ಥಿತರಿದ್ದರು.
ಸಭೆಯಲ್ಲಿ ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ವಿಭಾಗಗಳಲ್ಲಿ ಖಾಲಿರುವ. ಲೈನ್ ಮ್ಯಾನ್ ಗಳ ಹುದ್ದೆಯನ್ನು ಶೀಘ್ರವಾಗಿ ಭರ್ತಿ ಮಾಡುವ ಬಗ್ಗೆ ಮೇಲಾಧಿಕಾರಿಗಳ ಮುಖಾಂತರ ಸರಕಾರದ ಗಮನಕ್ಕೆ ತರುವುದು. ಅಲ್ಲದೆ ಅವಶ್ಯಕತೆ ಇರುವ ಕಡೆ ವಿದ್ಯುತ್ ಪರಿವರ್ತಕ ಹಾಗೂ ಫೀಡರ್ ಅಳವಡಿಕೆಯ ಬಗ್ಗೆ. ಸಭೆಯಲ್ಲಿ ಚರ್ಚಿಸಲಾಯಿತು.










