ನಡುಗಲ್ಲು: ಜೀರ್ಣೋದ್ಧಾರಗೊಳ್ಳಲಿರುವ ಶ್ರೀ ಮಹಾ ಮೃತ್ಯುಂಜಯೇಶ್ವರ ಹಾಗೂ ಶ್ರೀ ಪಾರ್ವತಿ ಕ್ಷೇತ್ರ

0

ಅಷ್ಟಮಂಗಳದಲ್ಲಿ ಕಂಡಂತೆ ಮುನಿಗಳಿಂದ ಅರ್ಚನೆಗೊಳಪಟ್ಟಿದ್ದ ಶಿವನ ಕಲ್ಲು

ಭಕ್ತಾದಿಗಳಿಂದ ಕರ ಸೇವೆ, ಗೊಚರಿಸಿದ ಶಿವನ ಮೂಲ ಕಲ್ಲು, ನೈವೇದ್ಯ, ಜಲಧಾರೆಯ ಪೂಜೆ

ನಾಲ್ಕೂರು ಗ್ರಾಮದ ನಡುಗಲ್ಲು ನಲ್ಲಿ ನೂತನವಾಗಿ ಜೀರ್ಣೋದ್ಧಾರ ಗೊಳ್ಳಲಿರುವ ಶ್ರೀ ಮಹಾ ಮೃತ್ಯುಂಜಯೇಶ್ವರ ಹಾಗೂ ಶ್ರೀ ಪಾರ್ವತಿ ಕ್ಷೇತ್ರದ ವಿಚಾರವಾಗಿ ದೈವಜ್ಞರು ನಡೆಸಿದ ಅಷ್ಟಮಂಗಳ ಚಿಂತನೆಯಲ್ಲಿ ಕಂಡು ಬಂದಂತೆ ಜು.7 ರಂದು
ವಲ್ಪಾರೆಯಲ್ಲಿ ಭಕ್ತಾದಿಗಳಿಂದ ಕರ ಸೇವೆ ನಡೆದು ಮಣ್ಣು ಅಗೆದಾಗ ಶಿವನ ಮೂಲ ಕಲ್ಲು ಕಂಡು‌ ಬಂದಿದ್ದು ಅಂದು ಅದಕ್ಕೆ ನೈವೇದ್ಯ, ಜಲಧಾರೆಯ ಪೂಜೆ ನಡೆಸಲಾಯಿತು.

ಅಷ್ಟಮಂಗಳದಲ್ಲಿ ತಿಳಿಸಿದಂತೆ ಅಗಸ್ತ್ಯ ಮುನಿಗಳಿಂದ ಪ್ರಾಕೃತಿಕವಾಗಿ ಬೆಳೆದ ಶಿವನ ಮೂಲ ಕಲ್ಲು ವಲ್ಪಾರೆ ಎಂಬಲ್ಲಿ ಇದ್ದು ಅದು ಮುನಿಗಳಿಂದ ಅರ್ಚನೆಗೊಳಪಟ್ಟಿತ್ತು. ಗತ ಕಾಲದ ಬಳಿಕ ಅದು ಮಣ್ಣಿನಲ್ಲಿ ಮುಚ್ಚಲ್ಪಟ್ಟಿತ್ತು ಎನ್ನಲಾಗಿದೆ. ಆ ಸ್ಥಳವು ಈಗ ಶಿವಕುಮಾರ ವಲ್ಪಾರೆ ಸ್ವಾದೀನದ ಜಾಗವಾಗಿದ್ದು ಅಲ್ಲಿ ಕರಸೇವಕರಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಸಲಾಯಿತು. ಭೂಕನನ ನಡೆಸಿದಾಗ ಮುನಿಗಳಿಂದ ಅರ್ಚಿಸಲ್ಪಟ್ಟ ಶಿವನ ಕಲ್ಲು ಗೋಚರವಾಗಿದೆ. ಬಳಿಕ ಅರ್ಚಕರಿದ್ದು ಆ ಕಲ್ಲನ್ನು ನೀರಿನಿಂದ ಶುಚಿಗೊಳಿಸಿ ಬಿಲ್ವಪತ್ರೆ ಮತ್ತು ಹೂವಿನಿಂದ ಅಲಂಕರಿಸಿ ಮಾವಿನ ಹಣ್ಣಿನ ನೈವೇದ್ಯ ಕೊಟ್ಟು ಪೂಜೆ ಸಲ್ಲಿಸಲಾಗಿ ಪ್ರಾರ್ಥಿಸಲಾಯಿತು. ಬಳಿಕ ಸೇವೆಯಲ್ಲಿ ಭಾಗವಹಿಸದವರೆಲ್ಲರಿಗೂ ಪ್ರಸಾದವನ್ನು ಹಂಚಲಾಯಿತು.
ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಸೇವಾ ಟ್ರಸ್ಟ್ ಸದಸ್ಯರು ಸಹಿತ ಹಲವಾರು ಪುರುಷ, ಮಹಿಳಾ ಭಕ್ತರು ಕರಸೇವೆಯಲ್ಲಿ ಪಾಲ್ಗೊಂಡರು.