ಪುತ್ತೂರು ನಗರ ಠಾಣೆಯಲ್ಲಿ ಎ.ಎಸ್.ಐ. ಆಗಿದ್ದ ಚಕ್ರಪಾಣಿ ಎ.ಕೆ.ಯವರಿಗೆ ಪಿಎಸ್ಐ ಆಗಿ ಭಡ್ತಿ

0

ಪುತ್ತೂರು ನಗರ ಠಾಣೆಯಲ್ಲಿ ಮೂರೂವರೆ ವರ್ಷಗಳಿಂದ ಎ.ಎಸ್.ಐ. ಆಗಿದ್ದ ಚಕ್ರಪಾಣಿ ಎ.ಕೆ.ಅವರು ಪಿ.ಎಸ್.ಐ. ಆಗಿ ಪದೋನ್ನತಿ ಹೊಂದಿ, ಪುತ್ತೂರು ಸಂಚಾರ ಠಾಣೆಗೆ ವರ್ಗಾವಣೆಯಾಗಿದ್ದು, ಜು. 8 ರಂದು ಅಲ್ಲಿ ಎಸ್.ಐ. ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಐವತ್ತೊಕ್ಲು ಗ್ರಾಮದ ದಿ. ಕೆಂಚಪ್ಪ ಗೌಡ ಎ.ಕೆ ಮತ್ತು ದಿ. ಲಲಿತಾ ದಂಪತಿಯ ಪುತ್ರರಾದ ಚಕ್ರಪಾಣಿಯವರು ಪ್ರಸ್ತುತ ಪುತ್ತೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ. ಪತ್ನಿ ಶ್ರೀಮತಿ ಪೂರ್ಣಿಮಾ ಗೃಹಿಣಿಯಾಗಿದ್ದು, ಪುತ್ರಿ ದೀಕ್ಷಿತಾ ಮಂಗಳೂರು ಶ್ರೀನಿವಾಸ ಕಾಲೇಜಿನಲ್ಲಿ ಎವಿಯೇಶನ್ ವಿದ್ಯಾರ್ಥಿನಿಯಾಗಿದ್ದಾರೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ವೃತ್ತಿ ಬದುಕು ಆರಂಭಿಸಿದ ಚಕ್ರಪಾಣಿಯವರು ಕದ್ರಿ, ಮಂಗಳೂರು ಡಿ.ಸಿ.ಆರ್.ಬಿ., ಉಪ್ಪಿನಂಗಡಿ, ಸಂಪ್ಯ ಹಾಗೂ ಪುತ್ತೂರು ನಗರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.