ಧನಂಜಯ ವಾಗ್ಲೆ ಕೊಡಿಯಾಲಬೈಲು ನಿಧನ

0

ಭಾಲಾವಲೀಕಾರ್ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜ ಸುಳ್ಯ ಇದರ ಸ್ಥಾಪನೆಗೆ ಮತ್ತು ಅಭಿವೃದ್ಧಿಗೆ ಶ್ರಮಿಸಿದ್ದ, ಜನ ಸಂಘ ಕಾಲದ ಹಿರಿಯ ಕಾರ್ಯಕರ್ತರಾಗಿದ್ದ ಸುಳ್ಯದ ಕೊಡಿಯಾಲಬೈಲು ನಿವಾಸಿ ಧನಂಜಯ ವಾಗ್ಲೆಯವರು ಇಂದು ನಿಧನರಾದರು.

ಅವರಿಗೆ 74 ವರ್ಷ ವಯಸ್ಸಾಗಿತ್ತು.

ಇವರು ರಾ.ಸ್ವ.ಸಂಘ, ಭಾರತೀಯ ಜನಸಂಘ/ಭಾ.ಜ.ಪಾ.ದ ಹಿರಿಯ ಕಾರ್ಯಕರ್ತರು, ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಭೀಕರ ಪೋಲೀಸ್ ದೌರ್ಜನ್ಯ ಕ್ಕೊಳಗಾಗಿದ್ದರು. ಅಪ್ಪಟ ರಾಷ್ಟ್ರಪ್ರೇಮಿಯಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.