ಎರಡು ನ್ಯಾಯಾಲಯದಲ್ಲಿ ಒಟ್ಟು 576 ಪ್ರಕರಣ ಸುಮಾರು 1.76 ಕೋಟಿ ರೂಪಾಯಿ ಮೂಲಕ ಇತ್ಯರ್ಥ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸುಳ್ಯ ನ್ಯಾಯಾಲಯದಲ್ಲಿ ಜು 12 ರಂದು ಲೋಕಾ ಅದಾಲತ್ ಕಾರ್ಯಕ್ರಮ ನಡೆಯಿತು.
ಸುಳ್ಯದ ಎರಡು ನ್ಯಾಯಾಲಯದಲ್ಲಿ ಒಟ್ಟು 576 ಪ್ರಕರಣಗಳು ರೂ.1,17,79,764 ಮೂಲಕ ಇತ್ಯರ್ಥ ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 251 ಕ್ರಿಮಿನಲ್ ಪ್ರಕರಣಗಳಲ್ಲಿ 210 ಪ್ರಕರಣಗಳು ರೂ.11,51,757 ಮೂಲಕ ಇತ್ಯರ್ಥ ಪಡಿಸಲಾಗಿದ್ದು
51 ಸಿವಿಲ್ ಪ್ರಕರಣಗಳಲ್ಲಿ 30 ಪ್ರಕರಣಗಳು ರೂ.45,70,000 ರ ಮೂಲಕ ಇತ್ಯರ್ಥಗೊಂಡಿದೆ.








ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 371 ಕ್ರಿಮಿನಲ್ ಪ್ರಕರಣಗಳಲ್ಲಿ 351 ಪ್ರಕರಣಗಳು ರೂ.55,72,611 ರ ಮೂಲಕ ಇತ್ಯರ್ಥ ಪಡಿಸಲಾಗಿದೆ. ಹಾಗೂ ಒಟ್ಟು 20 ಸಿವಿಲ್ ಪ್ರಕರಣಗಳಲ್ಲಿ 15 ಪ್ರಕರಣಗಳು ರೂ.4,85,396 ರ ಮೂಲಕ ಇತ್ಯರ್ಥ ಪಡಿಸಲಾಗಿದೆ.

ಬ್ಯಾಂಕ್ ನ ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿ ಒಟ್ಟು 7 ಪ್ರಕರಣಗಳು ರೂ.7,06,541 ರ ಮೂಲಕ ಇತ್ಯರ್ಥ ಗೊಂಡಿರುತ್ತದೆ.
ಈ ಮೂಲಕ ಲೋಕ ಅದಾಲತ್ ನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 576 ಪ್ರಕರಣಗಳು ರೂ. 117,79,764 ರ ಮೂಲಕ ಇತ್ಯರ್ಥಗೊಂಡಿರುತ್ತದೆ.
ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಬಾಬು ಬಿ.ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಕು.ಅರ್ಪಿತಾ ಉಪಸ್ಥಿತರಿದ್ದರು.
ವಕೀಲ ಸಂಧಾನಕಾರರಾಗಿ ಶ್ರೀಮತಿ ಪಲ್ಲವಿ ಕೆ ಎಲ್ ಹಾಗೂ ಕು.ಕೃಜನಿ ಉಪಸ್ಥಿತರಿದ್ದರು.

ನೂರಾರು ಮಂದಿ ಫಲಾನುಭವಿಗಳು ಭಾಗವಹಿಸಿ ರಾಷ್ಟ್ರೀಯ ಲೋಕಾ ಅದಾಲತ್ ಇದರ ಪ್ರಯೋಜನ ಪಡೆದುಕ್ಕೊಂಡರು.










