








ಬೊಳುಬೈಲಿನ ಪೀಸ್ ಸ್ಕೂಲ್ ನಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಹಿಫ್ಝುಲ್ ಕುರ್ ಆನ್ ಕೋರ್ಸ್ ಆರಂಭಗೊಂಡಿದೆ.
ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿರುವ ರಿಸೈಟ್ ಇಸ್ಲಾಮಿಕ್ ಶಾಲೆಯಲ್ಲಿ ಲೌಕಿಕ ವಿದ್ಯಾಭ್ಯಾಸದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸ ನೀಡಲು ರಿಸೈಟ್ ಅರೇಬಿಕ್ ಮದ್ರಸವು ಕಾರ್ಯಚರಿಸುತ್ತಿದ್ದು ಇದೀಗ ಪ್ರದೇಶದ ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಸಂಪೂರ್ಣ ಕುರ್ ಆನ್ ಕಂಠಪಾಠ ಮಾಡುವ ನಿಟ್ಟಿನಲ್ಲಿ ಹಿಫ್ಝುಲ್ ಕುರ್ ಆನ್ ಕೋರ್ಸ್ ಪ್ರಾರಂಭಿಸಲಾಗಿದೆ.
ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳದ ಎಡಕ್ಕರದ ವಿದ್ವಾಂಸ ಶಿಹಾಬ್ ಎಡಕ್ಕರ ಕೋರ್ಸ್ ಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಸಂಚಾಲಕ ಕೆ. ಅಬೂಬಕ್ಕರ್ ಉಪಸ್ಥಿತರಿದ್ದರು. ಅರೇಬಿಕ್ ವಿಭಾಗದ ಮುಖ್ಯಸ್ಥ ಹಸೈನಾರ್ ಸ್ವಲಾಹಿ ಸ್ವಾಗತಿಸಿ, ಹಿಫ್ಝುಲ್ ಕುರ್ ಆನ್ ಕೋರ್ಸ್ ನ ಅಧ್ಯಾಪಕರಾದ ಹಾಫಿಝ್ ಇಝ್ಹಾರುಲ್ ಹಕ್ ಕಿರಾತ್ ಪಠಿಸಿದರು. ಶಾಲೆಯ ಪ್ರಾಂಶುಪಾಲ ಮುಹಮ್ಮದ್ ಸೈಫುಲ್ಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಲೆಯ ಕಾರ್ಯದರ್ಶಿ ಶಂಸುದ್ದೀನ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಹನೀಫ್, ಸಿಯಾದ್, ಅಬ್ದುಲ್ ರಝಾಕ್, ಮುನೀರ್ ಮತ್ತು ಫಾಝಿಲ್ ಉಪಸ್ಥಿತರಿದ್ದರು.










