














ಬೆಳ್ಳಾರೆಯ ಐತಿಹಾಸಿಕ ಸ್ಥಳವಾದ ಬಂಗ್ಲೆಗುಡ್ಡೆಗೆ ಸುಳ್ಯ ತಾಲೂಕು ಅಮರ ಸುಳ್ಯ ಸಮರ ಸಮಿತಿ ವತಿಯಿಂದ ಜು.13 ರಂದು ಭೇಟಿ ನೀಡಲಾಯಿತು.
ಬಂಗ್ಲೆಗುಡ್ಡೆಯಲ್ಲಿರುವ ಹಳೆಯ ಕಟ್ಟಡವನ್ನು ವೀಕ್ಷಿಸಲಾಯಿತು.

ಮುಂದಿನ ದಿನಗಳಲ್ಲಿ ಅಲ್ಲಿ ಜನಪ್ರತಿನಿಧಿಗಳ,ಸಾರ್ವಜನಿಕರ ಸಭೆ ಕರೆದು ಆಗಸ್ಟ್ 15 ರಂದು ಅಲ್ಲಿ ಧ್ವಜಾರೋಹಣ ನಡೆಸಲಾಗುವುದು , ಮತ್ತು ಅಲ್ಲಿಯ ಪಾರಂಪರಿಕ ಚರಿತ್ರೆಯನ್ನು ಉಳಿಸುವ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಅಮರ ಸುಳ್ಯಸಮರ ಸಮಿತಿ ತಾಲೂಕು ಅಧ್ಯಕ್ಷ ಚಂದ್ರಾ ಕೋಲ್ಚಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಕೂಸಪ್ಪ ಗೌಡ ಮುಗುಪ್ಪು,ಮಾಧವ ತಡಗಜೆ,ರವೀಂದ್ರ ಮರಕ್ಕಡ,ಆನಂದ ಬೆಳ್ಳಾರೆ,ಜಯರಾಮ ಉಮಿಕ್ಕಳ,ನ್ಯಾಯವಾದಿ ಮಹಾಬಲ ಗೌಡ,ಮೋನಪ್ಪ ತಂಬಿನಮಕ್ಕಿ,ತಿಮ್ಮಪ್ಪ ಗೌಡ ಕಾಯಾರ,ಪ್ರೇಮಚಂದ್ರ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.










