ಆಲೆಟ್ಟಿ (ನಾರ್ಕೋಡು) ಸರಕಾರಿ ಪ್ರಾಥಮಿಕ ಶಾಲೆಯಶತಮಾನೋತ್ಸವಕ್ಕೆ ಚಾಲನೆ

0

ಅಕ್ಷಯ್ ಕೆ.ಸಿ ಯವರಿಂದ ಕಂಪ್ಯೂಟರ್ ತರಗತಿ ಉದ್ಘಾಟನೆ

ಇಂಗ್ಲೀಷ್ ಮೀಡಿಯಂ ತರಗತಿಯನ್ನು ಉದ್ಘಾಟಿಸಿದ ಶಾಸಕಿ
ಕು. ಭಾಗೀರಥಿ ಮುರುಳ್ಯ

ಆಲೆಟ್ಟಿ ದ.ಕ ಜಿ.ಪಂ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು 100 ನೇ ವರ್ಷ ಪೂರೈಸಿದ ಹೊಸ್ತಿಲಲ್ಲಿ ಶತಮಾನೋತ್ಸವ ಸಂಭ್ರಮಕ್ಕೆ ಜು.13 ರಂದು ಚಾಲನೆ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ವಹಿಸಿದ್ದರು.
ನೂತನ ಕಂಪ್ಯೂಟರ್ ತರಗತಿಯನ್ನು ಸುಳ್ಯ ಎ.ಒ.ಎಲ್.ಇ ಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಯವರು ಉದ್ಘಾಟಿಸಿದರು.
ಶಾಸಕರು ತೆರಳಿದ ನಂತರದ ಸಭೆಯ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ವಹಿಸಿದ್ದರು.

ಶತಮಾನೋತ್ಸವದ ಮನವಿ ಪತ್ರವನ್ನು ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ ಯವರು ಬಿಡುಗಡೆ ಮಾಡಿದರು.
ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು ಸ್ಕ್ರೀನ್ ಪ್ಲೇ ಮಾಡುವ ಮೂಲಕ ಶತಮಾನೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರು ದಾನಿಗಳಾದ ಜನಾರ್ದನ ಭಟ್ ಬಿಸಿಲುಮಲೆ ಯವರನ್ನು ಸನ್ಮಾನಿಸಲಾಯಿತು.
ಸರಕಾರದ ಅನುಮೋದನೆಯಂತೆ ಸರಕಾರಿ ಶಾಲೆಯಲ್ಲಿ ಪ್ರಾರಂಭವಾಗಲಿರುವ
ಇಂಗ್ಲೀಷ್ ಮೀಡಿಯಂ ತರಗತಿಯನ್ನು ಶಾಸಕರು ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.

ಆಲೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ 6 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.


ಬಿ.ಎಡ್ ಪರೀಕ್ಷೆಯಲ್ಲಿ ಶೇ. 95.5% ಅಂಕಗಳೊಂದಿಗೆ ತೇರ್ಗಡೆಯಾದ
ಹಿರಿಯ ವಿದ್ಯಾರ್ಥಿನಿ
ಕು.ಭವ್ಯಶ್ರೀ ಬಾರ್ಪಣೆ ಯವರನ್ನು ಹಾಗೂ ಆಲೆಟ್ಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಯವರನ್ನು ಅಭಿನಂದಿಸಲಾಯಿತು.
ಕಂಪ್ಯೂಟರ್ ತರಗತಿಯ ಪೀಠೋಪಕರಣ ಕೊಡುಗೆ ನೀಡಿದರೋಟರಿ ಸಿಟಿ ಅಧ್ಯಕ್ಷ ಹೇಮಂತ್ ಕಾಮತ್, 5 ಕಂಪ್ಯೂಟರ್ ಒದಗಿಸಿಕೊಟ್ಟ ಪಾನೀಯ ನಿಗಮದ ವಿಷ್ಣು ಪ್ರಸಾದ್ ನಾರ್ಕೋಡು, 1 ಕಂಪ್ಯೂಟರ್ ನೀಡಿದ ಶ್ರೀಮತಿ ಪುಷ್ಪಾವತಿ ನಾರ್ಕೋಡು, ರಂಗಮಂದಿರ ದಾನಿಗಳಾದ ದಿ. ಡಾ. ಶಿವಾನಂದ ಗಬ್ಬಲ್ಕಜೆ ಯವರ ಪರವಾಗಿ ಸಹೋದರಿ ಜಿ.ಎಸ್.ರುಕ್ಮಿಣಿ ಗಬ್ಬಲ್ಕಜೆ ಯವರನ್ನು ಸನ್ಮಾನಿಸಲಾಯಿತು.
ದಿ.ವೆಂಕಪ್ಪ ಗೌಡ ನಾರ್ಕೋಡು ರವರ ಸ್ಮರಣಾರ್ಥ ಶ್ರೀಮತಿ ಪುಷ್ಪಾವತಿ ನಾರ್ಕೋಡು ರವರು ಹಾಗೂ ಗುರುಪ್ರಸಾದ್ ರೈ ಮೊರಂಗಲ್ಲು ರವರು ತಲಾ 50 ಸಾವಿರದಂತೆ ಸಹಾಯಧನ ಶತಮಾನೋತ್ಸವಕ್ಕೆ ನೀಡಿದರು. ನಾರ್ಕೋಡು
ಕಲ್ಪತರು ಸ್ವ ಸಹಾಯ ಸಂಘದ ವತಿಯಿಂದ ರೂ. 79,000/- ನ್ನು ಸಹಾಯಧನ ನೀಡಲಾಯಿತು.


ವೇದಿಕೆಯಲ್ಲಿ
ಮುಖ್ಯ ಅಭ್ಯಾಗತರಾಗಿ ಕೆ.ಡಿ.ಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ,
ಆಲೆಟ್ಟಿ ಪಂಚಾಯತ್ ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸತ್ಯಪ್ರಸಾದ್ ಗಬ್ಬಲ್ಕಜೆ, ಹಿರಿಯ ಉದ್ಯಮಿ ಕೆ.ಕೃಷ್ಣ ಕಾಮತ್ ಅರಂಬೂರು, ಮಂಗಳೂರು ಎಂ.ಆರ್.ಪಿ.ಎಲ್ ಜನರಲ್ ಮ್ಯಾನೇಜರ್ ಸತೀಶ್ ಎಂ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಬೆಂಗಳೂರು ಪಾನೀಯ ನಿಗಮದ ಉದ್ಯೋಗಿ ವಿಷ್ಣುಪ್ರಸಾದ್ ನಾರ್ಕೋಡು, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ರೊ.ಹೇಮಂತ್ ಕಾಮತ್ ಅರಂಬೂರು, ಕೃಷ್ಣ ಕನ್ಸಲ್ಟೆನ್ಸಿ ಇಂಜಿನಿಯರ್ ಕೃಷ್ಣ ರಾವ್ ನಾವೂರು, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು, ನಿವೃತ್ತ ಮುಖ್ಯ ಶಿಕ್ಷಕ ವೆಂಕಪ್ಪ ಮಾಸ್ತರ್ ಕುಂಚಡ್ಕ, ಹಿರಿಯ ವಿದ್ಯಾರ್ಥಿ ಜಿ.ಎಸ್.
ರುಕ್ಮಿಣಿ ಗಬ್ಬಲ್ಕಜೆ ಮಂಗಳೂರು, ಹಿರಿಯ ವಿದ್ಯಾರ್ಥಿ ಪಿ.ಡಬ್ಲ್ಯು ಡಿ ಗುತ್ತಿಗೆದಾರ ಲತೀಫ್ ಸುಳ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಚಂದ್ರ ಏಣಾವರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಗಿರೀಶ್ ನಾರ್ಕೋಡು, ರಾಕೇಶ್ ಕುಡೆಕಲ್ಲು, ಪ್ರಶಾಂತ್ ಕೋಲ್ಚಾರು ಸನ್ಮಾನ ಪತ್ರ ವಾಚಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.


ಶಾಲಾ ಮುಖ್ಯ ಶಿಕ್ಷಕಿ
ಶ್ರೀಮತಿ ಸುನಂದ ಜಿ ಸ್ವಾಗತಿಸಿದರು. ಸಮಿತಿ ಸಂಚಾಲಕ ಚಂದ್ರಕಾಂತ ನಾರ್ಕೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ವಂದಿಸಿದರು. ಹಿರಿಯ ವಿದ್ಯಾರ್ಥಿಗಳಾದ ಮೋಹನ ಎ.ಕೆ ಮತ್ತು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ಶಿಕ್ಷಕರು ಸಹಕರಿಸಿದರು. ಕಾರ್ಯಕ್ರಮದಲ್ಲಿ
ನಿವೃತ್ತ ಶಿಕ್ಷಕರು,
ಹಿರಿಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಅದ್ಯಾಪಕ ವೃಂದದವರು, ಭೋದಕೇತರ ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಊರಿನವಿದ್ಯಾಭಿಮಾನಿಗಳು ಭಾಗವಹಿಸಿದರು. ಅಪರಾಹ್ನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ವಾಯಿತು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.