ಅಗ್ನಿ ದುರಂತಕ್ಕೆ ತುತ್ತಾದ ಅರಂತೋಡು ಪಂಚಾಯತ್ ಘನ ತಾಜ್ಯ ಘಟಕಕ್ಕೆ ಸಂಸದರ ಭೇಟಿ

0

ಪಂಚಾಯತ್ ಅಧ್ಯಕ್ಷ ರಿಂದ ಮರುನಿರ್ಮಾಣ ಅನುದಾನಕ್ಕಾಗಿ ಮನವಿಗೆ _ ಸಹಕಾರ ಭರವಸೆ

ಜುಲೈ 9ರಂದು ಅಗ್ನಿ ದುರಂತಕ್ಕೆ ತುತ್ತಾದ ರಾಜ್ಯಕ್ಕೆ ಮಾದರಿ ಕಾರ್ಯನಿರ್ವಹಿಸುತ್ತಿದ್ದ ಅರಂತೋಡು ಗ್ರಾಮ ಪಂಚಾಯಿತಿನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳೂರು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಬ್ರಿಜಿಶ್ ಚೌಟರವರು ಜುಲೈ 15 ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ರಾದ ಕೇಶವ ಅಡ್ತಲೆಯವರು ಘಟಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿ ಘಟಕ ಮರು ನಿರ್ಮಾಣಕ್ಕೆ ಅನುದಾನಕ್ಕೆ ಮನವಿ ನೀಡಿದರು.

ಮನವಿ ಪೂರಕವಾಗಿ ಸ್ಪಂದಿಸಿರಿವ ಸಂಸದ ರು ಅನುದಾನದ ಭರವಸೆ ನೀಡಿದರು. ಸಂಸದರ ಭೇಟಿ ಸಂದರ್ಭದಲ್ಲಿ ಆರಂತೋಡು ಸಹಕಾರ ಸಂಘದ ಅಧ್ಯಕ್ಷ ರಾದ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ, .ಸಹಕಾರಿ ಸಂಘದ ಸಮೃದ್ಧಿ ಮಾರ್ಟ್ ಅಧ್ಯಕ್ಷ ರಾದ ದಯಾನಂದ ಕುರುಂಜಿ, ಬಿ. ಜೆ. ಪಿ.ಮಂಡಲ ಸಮಿತಿ ಅಧ್ಯಕ್ಷ ರಾದ ವೆಂಕಟ್ ವಳಲಂಬೆ, ಬಿ. ಜೆ. ಪಿ.ಗುತ್ತಿಗಾರು ಮಹಾ ಶಕ್ತಿಕೇಂದ್ರದ ಪಕ್ಷ ದ ಪ್ರಮುಖರಾದ ಕೃಷ್ಣಯ್ಯ ಮೂಲೆ ತೋಟ, ಸತೀಶ್ ನಾಯ್ಕ್, ರೋಹಿತ್ ಕಲ್ಲುಗದ್ದೆ, ಭಾರತಿ ಪುರುಷೋತ್ತಮ್ ಉಳುವಾರು. ಮೋಹನ ಪಾರೇಮಜಲು ಪ್ರವೀಣ್ ಎಲ್ಪುಕಜೆ ಮುಂತಾದವರು ಹಾಜರಿದ್ದರು.