







ಸುಳ್ಯದ ಪರಶಿನಿ ಕ್ರಿಯೇಷನ್ಸ್ ರವರ ಕಲಿಯುಗ ನಾದನ್ ಶ್ರೀ ಮುತ್ತಪ್ಪನ್ ಎಂಬ ಹೊಸ ಮಲಯಾಳಂ ಆಲ್ಬಂ ಗೀತೆಯ ಪೋಸ್ಟರ್ ಬಿಡುಗಡೆಯು ಶಾಂತಿನಗರ ಮುತ್ತಪ್ಪನ್ ತಿರುವಪ್ಪ ದೈವಸ್ಥಾನದಲ್ಲಿ ಜು.15 ರಂದು ನಡೆಯಿತು.
ದೈವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಶಾಂತಿನಗರ ರವರು ಪ್ರಾರ್ಥನೆ ನೆರವೇರಿಸಿದರು.
ಆಡಳಿತ ಸಮಿತಿ ಅಧ್ಯಕ್ಷ ಮಧುಸೂದನ್ ಪಿ.ಎಂ ಆಲ್ಬಂ ಗೀತೆಯ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಗಣೇಶ್ ಮ್ಯೂಸಿಕಲ್ಸ್ ನಿರ್ದೇಶಕ ಗಣೇಶ್ ಆಚಾರ್ಯ, ಗಾಯಕ ಭಾಸ್ಕರ ಆಚಾರ್ಯ, ಗಾಯಕಿ ಕು.ಕಾವ್ಯ ಗಣೇಶ್ ಆಚಾರ್ಯ ಸುಳ್ಯ ಹಾಗೂ ಮನೆಯವರು, ಅರ್ಚಕರ ಮನೆಯವರು ಮತ್ತು ದೈವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.










