
ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ ಬಿ .ಎಂ. ಎಸ್ ಸಂಯೋಜಿತ
ಎಡಮಂಗಲ ಘಟಕವನ್ನು ಇತ್ತೀಚಿಗೆ ರಚಿಸಲಾಯಿತು.
ಎಡಮಂಗಲ ಪಂಚಾಯತ್ ಸಭಾಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು
ತಾಲೂಕು ಅಟೋ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್ ವಹಿಸಿದ್ದರು.









ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ಅಧ್ಯಕ್ಷ
ಪಿ .ಗೋಪಾಲಕೃಷ್ಣ ಭಟ್ ಪೈಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ,ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರ್,
ಹಾಲು ಉತ್ಪಾದಕರ ಒಕ್ಕೂಟದ ಸಂಘದ ಅಧ್ಯಕ್ಷ ದಾಮೋದರ ಗೌಡ ಲೆಕ್ಕಸಿರಿ ಮಜಲು,
ವಿಶ್ವ ಹಿಂದೂ ಪರಿಷತ್ ಭಜರಂಗದಳ ಅಧ್ಯಕ್ಷ ಈಶ್ವರ ಗೌಡ ಜಾಲ್ತಾರು, ಕೋಶಾಧಿಕಾರಿ ರವಿ.ಎಸ್ ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್. ಎಂ ರವರು ಸಂಘದ ಕಾರ್ಯಚಟುಗಟಿಗಳ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಡಮಂಗಲ ಘಟಕದ
ನೂತನ ಸಮಿತಿಯ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ
ಲಕ್ಷ್ಮೀನಾರಾಯಣ (ಗಣೇಶ)ಜಾಲ್ತಾರ್,
ಕಾರ್ಯದರ್ಶಿಯಾಗಿ ಸುಮಂತ್ ಡೆಕ್ಕೆಳ,
ಕೋಶಾಧಿಕಾರಿ ರೋಹಿತ್ ನಡುಬೈಲು, ನಿರ್ದೇಶಕರಾಗಿ ಪ್ರೇಮ ರಾಜ್, ಮಾಧವ, ಸುಂದರ, ಸಂತೋಷ್, ತೀರ್ಥಾನಂದ,
ದಿನೇಶ್ ಬಿ ಯವರನ್ನು ಆಯ್ಕೆ ಮಾಡಲಾಯಿತು.
ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಗಿರೀಶ್ ನಡುಬೈಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಮಂತ್ ಡೆಕ್ಕೆಳ ವಂದಿಸಿದರು.










