ಶ್ಯಾನುಭಾಗರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ – ಶಾಸಕಿ ಭಾಗೀರಥಿ ಮುರುಳ್ಯ
ಗೋಪಾಲಕೃಷ್ಣ ಶ್ಯಾನುಭಾಗರು ಜೀವನದಲ್ಲಿ ನಡೆದು ಬಂದ ದಾರಿ ನಮಗೆ ಆದರ್ಶವಾಗಿದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು. ಅವರು ಜು. 8ರಂದು ನಿಧನರಾದ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ, ಪ್ರಗತಿಪರ ಕೃಷಿಕ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಬೆಳ್ಳಾರೆಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ಮಾತನಾಡಿದರು. ಗೋಪಾಲಕೃಷ್ಣ ಶ್ಯಾನುಭಾಗರ ಪುತ್ರರಾದ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್, ಕಳೆದ ೩೩ ವರ್ಷಗಳಿಂದ ಬ್ಯಾಂಕ್, ಇನ್ಸೂರೆನ್ಸ್ ಪೆನಲ್ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಗೌರೀಶಚಂದ್ರ ಶ್ಯಾನುಭಾಗ್, ಅಮೇರಿಕಾದಲ್ಲಿ ಫೋರ್ಡ್ ಸಂಸ್ಥೆಯಲ್ಲಿ ಡಿಸೈನ್ ಇಂಜಿನಿಯರ್ ಆಗಿರುವ ಅನಿಲ್ ಶ್ಯಾನುಭಾಗ್, ಪುತ್ತೂರಿನಲ್ಲಿ ಮಹೇಂದ್ರ ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ರಾಜೇಶ್ ಶ್ಯಾನುಭಾಗ್, ಪುತ್ರಿಯರಾದ ಶ್ರೀಮತಿ ವಂದನಾ ನಾಯಕ್, ಶ್ರೀಮತಿ ಶಾಂತಾ ಕಾಮತ್ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಮರಿಮಗು, ಗೋಪಾಲಕೃಷ್ಣ ಶ್ಯಾನುಭಾಗರ ಬಂಧುಗಳು, ಹಿತೈಷಿಗಳು, ಕುಟುಂಬಸ್ಥರು ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.
















ಗೌರೀಶ ಚಂದ್ರ ಶ್ಯಾನುಭಾಗ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿ, ರಾಜೇಶ್ ಶ್ಯಾನುಭಾಗ್ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.
ಕೂಡು ಕುಟುಂಬ ಹೇಗಿರಬೇಕೆಂಬುದಕ್ಕೆ ಶ್ಯಾನುಭಾಗರ ಕುಟುಂಬ ಆದರ್ಶ. ಕೃಷಿಯಲ್ಲೂ ಆಧುನೀಕರಣವನ್ನು ಅಳವಡಿಸಿಕೊಂಡು ಆದರ್ಶ ಕೃಷಿಕರಾಗಿ ಸಮಾಜಕ್ಕೆ ಮಾದರಿಯಾಗಿ ಬದುಕಿದವರು ಶ್ಯಾನುಭಾಗರು – ನರೇಂದ್ರ ರೈ ದೇರ್ಲ
ಶ್ಯಾನುಭಾಗರು ಜೀವನದಲ್ಲಿ ಮಾಡಿದ ಸಾಧನೆಗಳು, ಅವರ ಆದರ್ಶಗಳು ಮತ್ತು ಅವರು ನಡೆದು ಬಂದ ದಾರಿಯನ್ನು ನಾವು ಅನುಸರಿಸಿದರೆ ಅದುವೇ ನಿಜವಾದ ಶ್ರದ್ಧಾಂಜಲಿ. ಸಾಹಿತಿಯಾಗಿ ಅವರು ಬರೆದ ನೆನಪುಗಳು ಎಂಬ ಪುಸ್ತಕ ಅತ್ಯುತ್ತಮವಾಗಿದೆ. ತಾವೊಬ್ಬರೇ ಬೆಳೆಯದೆ ಇತರರನ್ನು ಜೊತೆಯಲ್ಲಿ ಬೆಳೆಸಿ ಸಮಾಜಕ್ಕೆ ಆದರ್ಶರಾಗಿದ್ದವರು.
- ಎಂ.ಬಿ. ಸದಾಶಿವ
ಹಾಸ್ಯ ಪ್ರಜ್ಞೆವುಳ್ಳವರು. ಪ್ರತ್ಯುತ್ಪನ್ನಮತಿತ್ವ ಹೊಂದಿದ್ದರಲ್ಲದೆ. ಕ್ಷಣ ಕ್ಷಣಕ್ಕೂ ಅಪ್ಡೇಟ್ ಆಗ್ತಾ ಇದ್ದವರು. ಅಗರ್ಭ ಶ್ರೀಮಂತರಾಗಿದ್ದರೂ ಅದನ್ನು ತೋರ್ಪಡಿಸದೆ ಎಲ್ಲರೊಂದಿಗೆ ಬೆರೆಯುತ್ತಿದ್ದರು – ವಿ. ಗಣೇಶ್ ಭಟ್ ಮೀನಾ ಎಂಟರ್ಪ್ರೈಸ್ ಬೆಳ್ಳಾರೆ










