ಲಕ್ಷಾಂತರ ರೂಪಾಯಿಗಳ ಕೃಷಿ ನಾಶ

ಪೆರಾಜೆ ನಿವಾಸಿ ಹಿರಿಯ ಕೃಷಿಕರಾದ ದಿವಾಕರ್ ರೈ ರವರ ಕೃಷಿ ಫಾರಂಗೆ ಇಂದು ಮುಂಜಾನೆ ಆನೆಗಳ ಹಿಂಡು ಲಗ್ಗೆ ಇಟ್ಟಿದ್ದು ಲಕ್ಷಾಂತರ ರೂಪಾಯಿಗಳ ಕೃಷಿ ಬೆಳೆಗಳನ್ನು ನಾಶ ಮಾಡಿರುವ ಬಗ್ಗೆ ವರದಿಯಾಗಿದೆ.









ತೋಟಕ್ಕೆ ನುಗ್ಗಿರುವ ಆನೆಗಳು 30 ಕ್ಕೂ ಹೆಚ್ಚು ತೆಂಗಿನ ಮರಗಳು, ಕಂಗು ಬಾಳೆ ಗಿಡ ಅದೇ ರೀತಿ ನಾಟಿ ಮಾಡಿದ್ದ ಬತ್ತದ ಗದ್ದೆಯನ್ನು ಕೂಡ ನಾಶ ಮಾಡಿದೆ. ಇದು ಕೇವಲ ತೋಟದ ಹೊರ ಭಾಗದಿಂದ ಕಾಣುತ್ತಿರುವ ದೃಶ್ಯವಾಗಿದ್ದು ಇನ್ನು ಒಳ ಭಾಗದಲ್ಲಿ ಅದೆಷ್ಟೋ ಕೃಷಿಗಳು ನಾಶವಾಗಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಪಿ ಬಿ ದಿವಾಕರ್ ರೈ ರವರ ಸಹೋದರ ಪಿ ಬಿ ಸುಧಾಕರ್ ರೈ ರವರು ಸುದ್ದಿಗೆ ತಿಳಿಸಿದ್ದಾರೆ.

ಮುಂಜಾನೆ ಎದ್ದು ಮನೆಯ ಅಂಗಳದಲ್ಲಿ ನೋಡುವ ಸಂದರ್ಭದಲ್ಲಿ ಈ ರೀತಿಯ ದೃಶ್ಯ ಕಂಡು ಮನೆಯ ಎಲ್ಲಾ ಸದಸ್ಯರು ಆತಂಕ ಮತ್ತು ಬೇಸರ ವ್ಯಕ್ತಪಡಿಸಿದ ಘಟನೆ ನಡೆದಿದೆ ಎಂದು ತಮ್ಮ ನೋವನ್ನು ಅವರು ಸುದ್ದಿಯೊಂದಿಗೆ ಹಂಚಿಕೊಂಡಿದ್ದಾರೆ.










