ನಾಲ್ಕೂರು ಗ್ರಾಮದ ಅಮೆಮನೆ ಸುಧೀರ್‌ರವರ ಮನೆಗೆ ನೆನ್ನೆ ತಡರಾತ್ರಿ ಸಾಗುವಾನಿ ಮರ ಮನೆಯ ಮೇಲೆ ಬಿದ್ದು ಮನೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಅವರ ಸಹೋದರ ಕುಶಾಲಪ್ಪರವರ ಹಣೆಯ ಭಾಗಕ್ಕೆ ಮತ್ತು ತುಟಿಗೆ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.















ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಗುತ್ತಿಗಾರು ಗ್ರಾಮ ಪಂಚಾಯಿತಿ ಸಿಬ್ಬಂದಿ ಆಗಮಿಸಿದ್ದು, ಸ್ಥಳೀಯ ಗಣ್ಯರು ಸೇರಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
(ಚಿತ್ರ ವರದಿ : ಡಿ.ಹೆಚ್.)










