ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಹಮ್ಮಿಕೊಂಡಿರುವ “ಚಿಣ್ಣರೊಂದಿಗೆ ಚಿಲಿಪಿಲಿ ಗಾನ – ಕಥಾ -ಯಾನ” ಸರಣಿ ಕಾರ್ಯಕ್ರಮದ ಏಳನೇ ಕಾರ್ಯಕ್ರಮವು ಜು. 26 ರಂದು ಅರಂತೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
















ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾವನಾ ಸಂಗೀತ ಶಾಲೆಯ ಸಂಚಾಲಕರಾದ ಕೆ.ಆರ್. ಗೋಪಾಲಕೃಷ್ಣ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ರವೀಶ್ ಭಾಗವಹಿಸಿ ಮಕ್ಕಳಿಗೆ ಹಾಡು ಕತೆಗಳನ್ನು ಹೇಳಿದರು.
ಶಾಲಾ ಮುಖ್ಯಶಿಕ್ಷಕರಾದ ಗೋಪಾಲಕೖಷ್ಣ ಬಿ. ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಧನಂಜಯ ಎಂ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಭಾನುಮತಿ ಎಸ್. ಬಿ. ವಂದಿಸಿದರು.
ಶಿಕ್ಷಕಿಯರಾದ ರೇಷ್ಮಾ ಜೆ. ಇ, ಗೀತಾಕುಮಾರಿ, ರೇಣುಕಾ ಕೆ, ಶಕುಂತಳ ಪಿ. ಕೆ, ಮಂಗಳ, ಬುಶ್ರಾ ಇವರುಗಳು ಸಹಕರಿಸಿದರು. ಮಕ್ಕಳ ಪೋಷಕರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗಾಗಿ ಹಾಡುಗಳನ್ನು ಹಾಡಿ, ಕತೆಯನ್ನು ಹೇಳಿ ಮಕ್ಕಳಿಗೆ ರಂಜನೆಯೊಂದಿಗೆ ಜ್ಞಾನವನ್ನೂ ನೀಡಿದ್ದು ಮಕ್ಕಳು ಇದರಲ್ಲಿ ಸಂಪೂರ್ಣ ತೊಡಗಿ ಆನಂದಿಸಿದರು.
ಕಸಾಪ ಸುಳ್ಯ ಹೋಬಳಿ ಘಟಕವು ತನ್ನ ಹೋಬಳಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಯೋಜಿಸಿದ್ದು ಪ್ರತೀ ಶನಿವಾರ ಆಯ್ದ ಶಾಲೆಯಲ್ಲಿ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಈ ಮೊದಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು, ಕೊಯಿಕುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲ, ಹಾಗೂ ಇಡ್ಯಡ್ಕದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಹಿಂದೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ.










