
ನಾಗರಪಂಚಮಿ ದಿನವಾದ ಜು.29 ರಂದು ಕುಂಭಕ್ಕೊಡು ಶಶಿಕಲಾ ಶುಭಕರ ರಾವ್ ರವರ ಮನೆಯಲ್ಲಿರುವ ಶ್ರೀ ನಾಗದೇವರಿಗೆ ನಾಗರ ಪಂಚಮಿ ದಿನದಂದು ಹಾಲು,ಸಿಯಾಳಾಭಿಷೇಕ ಪೂಜೆ ಕಾರ್ಯಕ್ರಮವು ಧರ್ಮಾರಣ್ಯದ ವೆಂಕಟೇಶ ಶಾಸ್ತ್ರೀಯವರ ಪೌರೋಹಿತ್ಯದಲ್ಲಿ ನಡೆಯಿತು.
















ಈ ಸಂದರ್ಭದಲ್ಲಿ ಕುಂಭಕ್ಕೊಡು ಶಶಿಕಲಾ ಅಚ್ಚುತ ಭಟ್ ಕಲಾಮಂದಿರ ಮಾಲಕಿ ಶಶಿಕಲಾ ಶುಭಕರ ರಾವ್,ರಾಜೇಶ್ ನಾಯಕ್ ಪುತ್ತೂರು ಸೇರಿದಂತೆ ಅನೇಕ ಗಣ್ಯರು ಹಾಗೂ ಕುಂಭಕ್ಕೊಡು ಕಟ್ಟಡದ ಉದ್ಯಮಿಗಳು, ಮಾಂಡೋವಿ ಮೋಟಾರ್,ಹುಂಡೈ ಶೋರೂಂ,ಟಿ ವಿ ಎಸ್ ಶೊರೂಂ ಮಾಲಕರು ಸಿಬ್ಬಂದಿಗಳು,ಸೇರಿ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದು, ನಾಗದೇವರಿಗೆ ಹಾಲು ,ಸಿಯಾಳ ಸಮರ್ಪಿಸಿದರು.











