ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆ.1 ರಂದು ನಡೆಯಬೇಕಿದ್ದ ವಾಹನಗಳ ಬಹಿರಂಗ ಹರಾಜು ಮುಂದೂಡಿಕೆ

0

ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯಲ್ಲಿ ವಿಲೇವಾರಿಯಾಗದೇ ಬಾಕಿಯಾದ 09 ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಅದರಂತೆ ವಾಹನಗಳನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ವಠಾರದಲ್ಲಿ ಆಗಸ್ಟ್ 01 ರಂದು ಮಾಡುವುದೆಂದು ಈ ಹಿಂದೆ ಪ್ರಕಟಿಸಲಾಗಿತ್ತು. ಅನಿವಾರ್ಯ ಕಾರಣದಿಂದ ಈ ಪ್ರಕ್ರಿಯೆಯನ್ನು ಮುಂದೂಡಿರುವುದಾಗಿ ಸುಬ್ರಹ್ಮಣ್ಯ ಠಾಣೆಯ ಎಸ್.ಐ ಕಾರ್ತಿಕ್ ತಿಳಿಸಿರುತ್ತಾರೆ.