ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮೇಲ್ಚಾವಣಿಯ ಉದ್ಘಾಟನಾ ಕಾರ್ಯಕ್ರಮ

0

ರೋಟರಿ ಕ್ಲಬ್ ಸುಳ್ಯ ಇದರ ಪ್ರಾಯೋಜಕತ್ವದ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ(ರಿ.) ಆಡಳಿತಕ್ಕೊಳಪಟ್ಟ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಇದರ ಮೇಲ್ಚಾವಣಿ ಉದ್ಘಾಟನಾ ಕಾರ್ಯಕ್ರಮವು ಜುಲೈ 30 ರಂದು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಜರ್ ಡೋನರ್ ರೋ ಡಾ. ರಾಮಮೋಹನ್ ಕೆ. ಎನ್. (ಅಧ್ಯಕ್ಷರು, ರೋಟರಿ ಕ್ಲಬ್ ಸುಳ್ಯ) ಇವರು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ವನಾಥ ಎಸ್. ಆರ್. (ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಕರ್ನಾಟಕ ಬ್ಯಾಂಕ್ ಮಂಗಳೂರು) ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಶ್ರೀಹರಿ ಪಿ.(ಮುಖ್ಯ ವ್ಯವಸ್ಥಾಪಕರು, ಕರ್ನಾಟಕ ಬ್ಯಾಂಕ್ ಪುತ್ತೂರು) ಮತ್ತು ಶ್ರೀ ರಾಜಾರಾಮ್( ಶಾಖಾ ವ್ಯವಸ್ಥಾಪಕರು, ಕರ್ನಾಟಕ ಬ್ಯಾಂಕ್ ಸುಳ್ಯ )ಇವರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನಿತರಾದ ವಿಶ್ವನಾಥ್ ಮತ್ತು ಶ್ರೀಹರಿ ಸಭೆಯನ್ನು ಉದ್ದೇಶಿಸಿ ಹಿತವಚನಗಳನ್ನಾಡಿದರು.

. ಮೇಲ್ಚಾವಣಿ ನಿರ್ಮಿಸಿದ ಭಾರತ ಗ್ರಾಮ ಸಂಪರ್ಕ ನಿರ್ಮಾಣ ಸುಳ್ಯದ ಆರ್. ಪತಂಜಲಿ ಭಾರದ್ವಾಜ್ ಇವರಿಗೆ ಸ್ಮರಣಿಕೆ ,ಫಲ ಪುಷ್ಪ ನೀಡಿ ಗೌರವಿಸಲಾಯಿತು. ಶಾಲಾ ಸಂಚಾಲಕರಾದ ರೋ PP MPHF ಪ್ರಭಾಕರನ್ ನಾಯರ್ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಲ್ಲಾ ಟ್ರಸ್ಟಿಗಳ ಪರವಾಗಿ ರೋಟೇ ರಿಯನ್ PP. PHF ಆನಂದ ಖಂಡಿಗ ಮಾತನಾಡಿದರು. ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಗುರುಗಳಾದ
ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತ್ಸ್ನಾ ಕೆ. ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಸದಸ್ಯರು, ಇನ್ನರ್ ವೀಲ್ ಕ್ಲಬ್ ನ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.
6ನೇ ತರಗತಿಯ ಸ್ವಸ್ತಿ ಪಿ. ಪ್ರಾರ್ಥನೆ ಮಾಡಿ, ರೊಟೇರಿಯನ್ PP PHF ಸೀತಾರಾಮ ರೈ ಸವಣೂರು ಇವರು ಸ್ವಾಗತಿಸಿದರು. ಖಜಾಂಚಿ ರೋಟೇರಿಯನ್ ಮಧುಸೂದನ್ ಕುಂಭಕೋಡು ವಂದಿಸಿದರು.
ಶಾಲಾ ಸಹಶಿಕ್ಷಕಿಯರಾದ ಶ್ರೀಮತಿ ಶೋಭಾ ಎ.ಬಿ. ಮತ್ತು ಶ್ರೀಮತಿ ಪವ್ಯ ಎ.ಬಿ. ನಿರೂಪಣೆಗೈದರು.