ನಾರ್ಕೋಡು ಬಳಿ ಅಕ್ರಮ ಕೆಂಪು ಕಲ್ಲು ಸಾಗಾಟ ಆರೋಪ

0

ಮೂರು ಲಾರಿ ಮತ್ತು ಚಾಲಕರನ್ನು ವಶಕ್ಕೆ ಪಡೆದ ಸುಳ್ಯ ಪೊಲೀಸರು- ಪ್ರಕರಣ ದಾಖಲು

ಸುಳ್ಯದ ಆಲೆಟ್ಟಿ ರಸ್ತೆ ನಾರ್ಕೋಡು ಬಳಿ ಕೆಂಪು ಕಲ್ಲು ಅಕ್ರಮ ಸಾಗಾಟದ ಮಾಹಿತಿ ತಿಳಿದ ಸುಳ್ಯ ಪೊಲೀಸರು ಕಲ್ಲು ಸಾಗಾಟ ಮಾಡುತಿದ್ದ ಮೂರು ಲಾರಿ ಹಾಗೂ ಲಾರಿಯ ಚಾಲಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಘಟನೆ ಆ 3 ರಂದು ಬೆಳಿಗ್ಗೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕರ ಮೇಲೆ
ಅ.ಕ್ರ ನಂ: 83/2025 ಕಲಂ: 83/2025 ಕಲಂ: 303(2) BNS & 4(1) 21MMRD& KARNATAKA MINOR MINERAL CONSISTENT RULE 3.44&66(1) &192(a)IMV ಆಕ್ಟ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಪಾಜೆ ನಿವಾಸಿ ಉದಯಕುಮಾರ್‌, ಕಲ್ಲುಗುಂಡಿ ನಿವಾಸಿ ವಿಘ್ನೇಶ್, ಮದೆನಾಡು ಗ್ರಾಮದ ಅರುಣ್ ಕುಮಾರ್ ಎಂಬುವರು ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ರವರ ಮಾರ್ಗದರ್ಶನದ ಮೇರೆಗೆ ಸುಳ್ಯ ಎಸ್ ಐ ಸಂತೋಷ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು