ದಬ್ಬಡ್ಕದಲ್ಲಿ ಆನೆ ದಾಳಿ : ಓರ್ವ ಕೃಷಿಕ ಬಲಿ

0

ಆನೆ ದಾಳಿ ನಡೆಸಿದ್ದು, ಓರ್ವ ಕೃಷಿಕ ಮೃತಪಟ್ಟ ಘಟನೆ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕಳೆದ ರಾತ್ರಿ ವರದಿಯಾಗಿದೆ.


ದಬ್ಬಡ್ಕದ ಶಿವಪ್ಪ ರವರು ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ.

ಅವರು ಆ.06 ರಂದು ರಾತ್ರಿ ನಾಯಿ ಬೊಗಳುತ್ತಿದ್ದ ಕಾರಣ ತೋಟಕ್ಕೆ ಹೋದಾಗ ಆನೆ ಅವರನ್ನು ತುಳಿಯಿತು. ಕೂಡಲೇ ಅವರನ್ನು ಸಂಪಾಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಮೃತ ಪಟ್ಟರೆಂದು ತಿಳಿದು ಬಂದಿದೆ.

ಅವರಿಗೆ 72 ವರ್ಷ ವಯಸ್ಸಾಗಿತ್ತು.