ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಿತಿನ್ ಕೊಯಿಂಗಾಜೆ ಆಯ್ಕೆ

0

ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಅಂತಿಮ ಬಿಕಾಂ ವಿದ್ಯಾರ್ಥಿ ಹಿತಿನ್ ಕೊಯಿಂಗಾಜೆ ಆಯ್ಕೆಯಾಗಿದ್ದಾರೆ.

ಪ್ರೌಢಶಿಕ್ಷಣವನ್ನು ಕಲ್ಲುಗುಂಡಿಯ ಸವೇರಪುರ ಪ್ರೌಢಶಾಲೆಯಲ್ಲಿ ಕಲಿತ ಹಿತಿನ್, ಪಿಯು ವಿದ್ಯಾಭ್ಯಾಸವನ್ನು ಪುತ್ತೂರಿನ ಫಿಲೋಮಿನಾದಲ್ಲಿ ಮಾಡಿ ಪದವಿ ವ್ಯಾಸಂಗಕ್ಕೆ ಮಂಗಳೂರಿನ ಮ್ಯಾಪ್ಸ್ ಕಾಲೇಜು ಸೇರಿದ್ದರು. ಇವರು ಸಂಪಾಜೆಯ ಸಹಕಾರಿ ಹಾಗೂ ರಾಜಕೀಯ ಧುರೀಣ ಸೋಮಶೇಖರ ಕೊಯಿಂಗಾಜೆ ಹಾಗೂ ಸುರೇಖಾ ದಂಪತಿಯ ಪುತ್ರ.