ಕಳೆದ ಜೂನ್ /ಜುಲೈ ತಿಂಗಳಲ್ಲಿ ನಡೆದ 2024-25 ನೇ ಸಾಲಿನ ಕರ್ನಾಟಕ ಕಾನೂನು
ವಿಶ್ವವಿದ್ಯಾನಿಲಯದ ಮೂರನೇ ವರ್ಷದ ಮತ್ತು ಐದನೇ ವರ್ಷದ ಕಾನೂನು ಪದವಿ ಪರೀಕ್ಷೆಗಳ
ಫಲಿತಾಂಶ ಪ್ರಕಟಗೊಂಡಿದ್ದು ಕೆ. ವಿ. ಜಿ ಕಾನೂನು ಮಹಾವಿದ್ಯಾಲಯಕ್ಕೆ ಉತ್ತಮ ಫಲಿತಾಂಶ
ಬಂದಿರುತ್ತದೆ.















ಅಂತಿಮ 5ನೇ ವರ್ಷ ಮತ್ತು 3 ವರ್ಷದ ಕಾನೂನು ಪದವಿ ಪರೀಕ್ಷೆಯಲ್ಲಿ ಹನ್ನೆರಡು ವಿದ್ಯಾರ್ಥಿಗಳು ವಿಶಿಷ್ಟ
ಮತ್ತು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಮೂವತ್ತ ಮೂರು ವಿದ್ಯಾರ್ಥಿಗಳು ದ್ವಿತೀಯ
ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. 5 ನೇ ವರ್ಷದ ಕಾನೂನು ಪದವಿ ಪರೀಕ್ಷೆ ಯಲ್ಲಿ ಆಶ್ರಿತ ಆ
ಪ್ರಥಮ ಹಾಗೂ ದಿವಿಜಾ ಬಿ. ಕೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಮೂರನೇ ವರ್ಷದ ಕಾನೂನು ಪದವಿ
ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ವಿಸ್ಮಯ ಗಂಗಮ್ಮ ಕೆ. ಎಲ್ ಮತ್ತು ದ್ವಿತೀಯ ಸ್ಥಾನವನ್ನು ಅಭಿಷೇಕ್. ಟಿ
ಪಡೆದಿರುತ್ತಾರೆ. ಉತ್ತಮ ಫಲಿತಾಂಶ ತಂದಿರುವ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು
,ಭೋದಕ ಮತ್ತು ಭೋದಕೇತರರು ಅಭಿನಂದಿಸಿರುತ್ತಾರೆ.










