ರೂ.273.13 ಕೋಟಿ ವ್ಯವಹಾರ,76.10 ಲಕ್ಷ ಲಾಭ – ಸದಸ್ಯರಿಗೆ ಶೇ.9 ಡಿವಿಡೆಂಡ್
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024 – 25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರ ಅಧ್ಯಕ್ಷತೆಯಲ್ಲಿ ಆ.9 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸ್ವಾಗತಿಸಿ ಮಾತನಾಡಿ ಸಂಘವು ವರದಿ ವರ್ಷದಲ್ಲಿ 273.13ಕೋಟಿ ವ್ಯವಹಾರ ನಡೆಸಿ 76.10 ಲಕ್ಷ ಲಾಭ ಗಳಿಸಿರುತ್ತದೆ.
ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
















ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ವರದಿ ಮಂಡಿಸಿದರು.
ಸಂಘದಲ್ಲಿ 2024 – 25 ನೇ ಸಾಲಿನಲ್ಲಿ ಮಾರಾಟ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ಮಾಡಿದ 10 ಮಂದಿ ಗ್ರಾಹಕರನ್ನು ಗುರುತಿಸಿ ಗೌರವಿಸಲಾಯಿತು.
ಉತ್ತಮ ನವೋದಯ ಸಂಘಗಳಾದ ಸ್ಕಂದ ಶ್ರೀ ನವೋದಯ ಸ್ವಸಹಾಯ ಸಂಘ ಖಂಡಿಗೆಮೂಲೆ ಮತ್ತು ಕೃಪಾಂಜಲಿ ನವೋದಯ ಸ್ವ ಸಹಾಯ ಸಂಘ ಐವರ್ನಾಡು ಇವರನ್ನು ಗೌರವಿಸಲಾಯಿತು.

ಸ್ಮರಣ ಸಂಚಿಕೆ ಬಿಡುಗಡೆ
ಐವರ್ನಾಡಿನ ಅಣ್ಣ ಪಾಲೆಪ್ಪಾಡಿ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ಅನಾವರಣದ ನೆನಪಿಗಾಗಿ ಹೊರ ತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸಂಚಿಕೆ ಬಿಡುಗಡೆಗೊಳಿಸಿದರು.
ಕೆ.ವಿ.ಜಿ.ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ದಿನೇಶ್ ಮಡ್ತಿಲರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಮಹೇಶ ಜಬಳೆ,ನಿರ್ದೇಶಕರಾದ ಅನಂತ ಕುಮಾರ್, ನಟರಾಜ್ ಸಿ.ಕೂಪ್, ಶ್ರೀನಿವಾಸ ಗೌಡ ಎಂ, ಸತೀಶ ಎಡಮಲೆ, ಶ್ರೀಮತಿ ದಿವ್ಯಾ ಎಂ.ಆರ್, ಶ್ರೀಮತಿ ಭವಾನಿ ಎಂ.ಸಿ, ಮಧುಕರ ಎನ್, ರವಿನಾಥ ಎಂ.ಎಸ್, ಚಂದ್ರಶೇಖರ ಎಸ್,ಪುರಂದರ ಎಸ್, ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣ ಸಿ.ಎಚ್,ರಾಜೇಂದ್ರ ಪಿ.ವೈ,ದ.ಕ.ಜಿ.ಕೇ.ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ರತನ್ ಕೆ.ಎಸ್ ಉಪಸ್ಥಿತರಿದ್ದರು.
ಶ್ರೀಮತಿ ದೇವಕಿ ಚೆಮ್ನೂರು ಪ್ರಾರ್ಥಿಸಿದರು.
ನಿರ್ದೇಶಕ ಸತೀಶ್ ಎಡಮಲೆ ವಂದಿಸಿದರು.










