
ಸರ್ವ ಕ್ರೈಸ್ತ ಸಮುದಾಯ ಸಂಘ ಸಂಪಾಜೆ ವಲಯ ಇದರ ಮೂರು ತಿಂಗಳ ಪ್ರಗತಿ ಪರಿಶೀಲನ ಸಭೆಯು ಸಂತೋಷ್ ಕ್ರಾಸ್ ರವರ ಅಧ್ಯಕ್ಷತೆಯಲ್ಲಿ ಕಲ್ಲುಗುಂಡಿಯ ಕಲ್ಲುoಪುರತ್ ಕಾಂಪ್ಲೆಕ್ಸ್ ನಲ್ಲಿ ಆ.10 ರಂದು ನಡೆಯಿತು.















ಸಂಘದ ಜೊತೆ ಕಾರ್ಯದರ್ಶಿ ಕೆರೋಲಿನ ಕ್ರಾಸ್ತ ವರದಿಯನ್ನು ಮಂಡಿಸಿದರು. ಕೆ ಪಿ ಜಾನಿ ಪ್ರಸ್ತವಿಕವಾಗಿ ಮಾತನಾಡಿ ಛತೀಗಡದಲ್ಲಿ ನಡೆದ ಕ್ರೈಸ್ತ ಬಗಿನಿಯರ್ ಬಂದನವನ್ನು ಸಂಘದ ಪರವಾಗಿ ಖಂಡಿಸಿದರು. ಖಜಾಂಜಿಯಾದ ಕುರಿಯಕೋಸ್ ಟಿ ಕೆ ಸಂಘದ ಆದಾಯ ಮತ್ತು ಖರ್ಚನ್ನು ಮಂಡಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು. ಸಂಘದ ಕಾನೂನು ಸಲಹೆಗಾರರಾದ ಅಡ್ವಾಕೇಟ್ ಡೊಮಿನಿಕ್ ಸಂಘದ ನೊಂದಣಿ ಮತ್ತು ಸದಸ್ಯತ್ವದ ಬಗ್ಗೆ ವಿವರಣೆಯನ್ನು ನೀಡಿದರು . ಬಳಿಕ ಸಭೆಯಲ್ಲಿ ಪದವಿ ವ್ಯಾಸಂಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಲಾರೆನ್ಸ್ ಮತ್ತು ಜೆಸ್ಮಿತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷರಾದ ಸಂತೋಷ್ ಕ್ರಾಸ್ತ ಪ್ರಸ್ತಾವಿಕ ಮಾತುಗಳನ್ನಾಡಿದರು.

ರಾಜೇಶ್ ಡಿಸೋಜಾ ಸರ್ವರನ್ನು ಸ್ವಾಗತಿಸಿ ,
ಸಂಘದ ಸದಸ್ಯೆ ಫಿಲೋಮೀನ ಕ್ರಾಸ್ತ ಧನ್ಯ ವಾದಿಸಿ ,
ಉಪಾಧ್ಯಕ್ಷರಾದ ಮೋಳಿ ರಿನ್ಸನ್ ಕಾರ್ಯಕ್ರಮವನ್ನು ನಿರೂಪಿಸಿದರು.










