








ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ ಇದರ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸುಳ್ಯದ ವಿವೇಕಾನಂದ ವೃತ್ತದ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಆ. 15 ರಂದು ಆಚರಿಸಲಾಯಿತು.
ಜೇಸಿಐ ಸುಳ್ಯ ಇದರ ಪೂರ್ವಾಧ್ಯಕ್ಷ ಜೇಸಿ. ಹೆಚ್.ಜಿ.ಎಫ್. ನವೀನ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜೇಸಿಐ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ ಸುರೇಶ್ ಕಾಮತ್, ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ. ಹೆಚ್.ಜಿ.ಎಫ್. ಗುರುಪ್ರಸಾದ್ ನಾಯಕ್, ಪೂರ್ವ ಅಧ್ಯಕ್ಷ ಜೇಸಿ.ಹೆಚ್.ಜಿ.ಎಫ್. ರಂಜಿತ್ ಕುಕ್ಕೆಟ್ಟಿ, ಕಾರ್ಯದರ್ಶಿ ಜೇಸಿ. ಲತಾಶಿ ಸುಪ್ರೀತ್ ಮೋಂಟಡ್ಕ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಶ್ರೀಮತಿ. ಸುಹಾಸಿನಿ, ನಿಲಯದ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜೇಸಿ ಸುರೇಶ್ ಕಾಮತ್ ಸ್ವಾಗತಿಸಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ ವಂದಿಸಿದರು.










