ಸುಳ್ಯ : ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸ್ಥಗಿತಗೊಂಡ ಮುಂಗಡ ಟಿಕೆಟ್ ಕೇಂದ್ರ

0

ದೂರದ ಊರಿಗೆ ತೆರಳಲು ಟಿಕೇಟ್ ಕಾದಿರಿಸಲು ಬರುವ ಪ್ರಯಾಣಿಕರ ಪರದಾಟ

ಸುಳ್ಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟು ಕಾಯ್ದಿರಿಸುವ ಕೇಂದ್ರ ಕಳೆದ ಕೆಲವು ದಿನಗಳಿಂದ ಸ್ಥಗಿತ ಗೊಂಡಿದ್ದು ಟಿಕೇಟ್ ಕೇಂದ್ರದ ಬಾಗಿಲು ಮುಚ್ಚಿಕೊಂಡಿದೆ.
ಇದರಿಂದಾಗಿ ದೂರದ ಊರಿಗೆ ಪ್ರಯಾಣಿಸಲು ಮುಂಗಡ ಟಿಕೇಟ್ ಕಾದಿರಿಸಲು ಬರುವ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಈ ಬಗ್ಗೆ ವಿಚಾರಣೆ ಹೋದ ಪ್ರಯಾಣಿಕರಿಗೆ ಇಲ್ಲಿ ಮಿಷನ್ ಹಾಳಾಗಿದ್ದು ಪುತ್ತೂರಿಗೆ ತೆರಳಿ ಟಿಕೇಟ್ ಮಾಡಿಸಿ ಕೊಳ್ಳಿ ಎಂದು ಉತ್ತರ ಲಭಿಸಿದೆ ಎನ್ನಲಾಗಿದೆ. ಸುಳ್ಯದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಡಿಪೋ ಕೂಡಾ ಇದ್ದು,ತಾಲೂಕು ಕೇಂದ್ರದಿಂದ ಅದೆಷ್ಟೋ ಪ್ರಯಾಣಿಕರು ದಿನಂಪ್ರತಿ ಬಂದು ಹೋಗುತ್ತಿರುತ್ತಾರೆ.ಇಂದು ಆ 17 ರಂದು ನಾನು 2 ನೇ ಬಾರಿ ಟಿಕೆಟ್ ಕಾಯ್ದಿರಿಸಲು ಹೋದಾಗ ಪ್ರಿಂಟರ್ ಸರಿ ಇಲ್ಲ. ಕಾಯ್ದಿರಿಸಲೇ ಬೇಕೆಂದಿದ್ದರೆ ಪುತ್ತೂರಿಗೆ ಹೋಗಿ ಎಂಬ ಬೇಜವಾಬ್ದಾರಿಯ ಉತ್ತರ ಕಛೇರಿ ಸಿಬ್ಬಂದಿಯ ಕಡೆಯಿಂದ ಬಂದಿದ್ದು,ಕಳೆದ ತಿಂಗಳು ಕೂಡ ಹೋಗಿದ್ದಾಗಲೂ ಇದೇ ಉತ್ತರ ಬಂದಿತ್ತು ಎಂದು ಅವರು ತಮಗಾದ ಸಮಸ್ಯೆಯನ್ನು ಸುದ್ದಿಗೆ ತಿಳಿಸಿದ್ದಾರೆ.

ಅಲ್ಲದೆ ತಾಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಇಂತಹ ಅವ್ಯವಸ್ಥೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಮಾತ್ರವಲ್ಲದೆ ಸರ್ಕಾರದ ಖಜಾನೆಗೂ ನಷ್ಟವುಂಟು ಮಾಡುತ್ತದೆ.ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಅವರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಸರಕಾರ ನಿಲ್ದಾಣಗಳಲ್ಲಿ ಆಗುವ ಈ ರೀತಿಯ ಸಮಸ್ಯೆಗಳನ್ನು ಕೂಡ ಪರಿಹರಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.