ಹರಿಹರ :ಕೃಷ್ಣ ಜನ್ಮಷ್ಟಮಿ ಪ್ರಯುಕ್ತ ಆಟೋಟ ಸ್ಪರ್ಧೆ

0

ಶಿವಹರಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಹಾಗು ಪ್ರೇಂಡ್ಸ್ ಹರಿಹರ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಷ್ಟಮಿ ಪ್ರಯುಕ್ತ ಆ.26ರಂದು ಸಾರ್ವಜನಿಕರಿಗೆ ವಿವಿಧ ಅಟೋಟ ಸ್ಪರ್ಧೆ ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅದ್ಯಕ್ಷರಾದ ವಿಜಯ ಕುಮಾರ್ ಅಂಗಣರವರು ನೆರವೇರಿಸಿದರು

ವೇದಿಕೆಯಲ್ಲಿ ಶಿವಹರಿ ಅಟೊ ರಿಕ್ಷಾ ಚಾಲಕ ಮಾಲಕರ ಸಂಘದ ಅದ್ಯಕ್ಷರಾದ ಮಧು ಗೊಳ್ಯಾಡಿ,ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಜಗದೀಶ್ ವಾಡ್ಯಪ್ಪನಮನೆ,ಲಕ್ಷ್ಮೀ ಟ್ರೇಡರ್ಸ್‌ ಹರಿಹರ ಇದರ ಮಾಲಕರಾದ ಲಕ್ಷ್ಮೀನಾರಾಯಣ ಅಂಬೆಕಲ್ಲು,ದರ್ಮಶ್ರೀ ಕಸ್ಷ್್ಟಕ್ಷನ್ ನ ಮಾಲಕರಾದ ರಾಜನ್ ಬೆಂಡೋಡಿ,ಲೋಕೇಶ್ ರಾಗಿಯಡ್ಕ ಉಪಸ್ಥಿತರಿದ್ದರು
ಋತ್ವಿಕ ರವರು ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ