ಕಂಝೋಲಿಯಮ್ ಮೀಲಾದ್ ಫೆಸ್ಟ್ -2025, ಹಾಗೂ ಆಕರ್ಷಕ ಮಿಲಾದ್ ರ್‍ಯಾಲಿ

ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮೀಲಾದ್ ಕಂಜೋಲಿಯಮ್ ಮಿಲಾದ್ ಫೆಸ್ಟ್ 2025 ಗಾಂಧಿನಗರ ಮುನವ್ವರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸಾ ಸಭಾಂಗಣದಲ್ಲಿ ತರ್ಬಿಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ನಡೆಯಿತು.
ಸೆ 5 ರಂದು ಈದ್ ಮೀಲಾದ್ ಅಂಗವಾಗಿ ಆಕರ್ಷಣ ಕಾಲ್ನಡಿಗ ಜಾಥಾ ಮಸೀದಿ ಅವರಣದಿಂದ ಗಾಂಧಿನಗರ ವರೆಗೆ ನಡೆಯಿತು.
ಆ.31ರಂದು ಮದರಸ ವಿದ್ಯಾರ್ಥಿನಿಯರ ಕಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗ ಮಿಲಾದ್ ಫೆಸ್ಟ್ ಸೆ.02 ರಂದು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಸಂಜೆ ಸ್ಥಳೀಯ ಖತೀಬರಾದ ಅಲ್ ಹಾಜ್ ಆಶ್ರಫ್ ಖಾಮಿಲ್ ಸಖಾಫಿ ರವರಿಂದ ಹುಬ್ಬುರ್ರಸೂಲ್ ಪ್ರಭಾಷಣ ಮಾಡಿದರು.








ಸಯ್ಯಿದ್ ತಾಹಿರ್ ತಂಙಳ್ ಸುಳ್ಯ ದುವಾ ಮೂಲಕ ಉದ್ಘಾಟನೆ ಮಾಡಿದರು.

ಕಂಜೋಲಿಯಮ್ ಕಾರ್ಯಕ್ರಮದಲ್ಲಿ ಸುಮಾರು 650 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ 160 ಕ್ಕೂ ಹೆಚ್ಚು ಸ್ಪರ್ಧಾ ಕಾರ್ಯಕ್ರಮ ಗಳು ನಡೆಯಿತು.
ಸೆ.5 ರಂದು ಬೆಳಿಗ್ಗೆ 7.30 ಕ್ಕೆ ಧ್ವಜಾರೋಹಣ ಬಳಿಕ
ಮದ್ರಸ ವಿದ್ಯಾರ್ಥಿಗಳ ಮೀಲಾದ್ ಜಾಥಾ ಬಳಿಕ ಬೆಳಿಗ್ಗೆ 11ಕ್ಕೆ ಗ್ರಾಂಡ್ ಮೌಲಿದ್ ಮಜ್ಲಿಸ್ ನಂತರ
ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.ಜುಮಾ ನಮಾಝಿನ ಬಳಿಕ
ಮೀಲಾದ್ ಸಮಾವೇಶ ಬಹುಮಾನ ವಿತರಣೆ ನಡೆದು ಮಧ್ಯಾಹ್ನ 2:15 ಗಂಟೆಗೆ ಸಾರ್ವಜನಿಕ ಸೀರಣಿ ವಿತರಣೆ ನಡೆಯಲಿದೆ.
ಎಲ್ಲಾ ಕಾರ್ಯಕ್ರಮಗಳಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಕೆ ಎಂ ಎಸ್ ಮಹಮ್ಮದ್,ಉಪಾಧ್ಯಕ್ಷರು ಮತ್ತು ಮದ್ರಸಾ ಉಸ್ತುವಾರಿ ಹಮೀದ್ ಬೀಜ ಕೊಚ್ಚಿ,
ಪ್ರ ಕಾರ್ಯದರ್ಶಿ ಐ ಇಸ್ಮಾಯಿಲ್ ಹಾಜಿ, ಕೋಶಾಧಿಕಾರಿ ಎಸ್ ಎಂ ಹಮೀದ್,ಮದ್ರಸಾ ಸದರ್ ಮುಅಲ್ಲಿಮ್ ಸಿರಾಜುದ್ದೀನ್ ಸಖಾಫಿ, ಸುಳ್ಯ ಸುಡಾ ಅಧ್ಯಕ್ಷ ಕೆ ಎಂ ಮುಸ್ತಫಾ, ಮುಖಂಡರುಗಳಾದ ಮಹಮ್ಮದ್ ಕುಂಞಿ ಗೂನಡ್ಕ, ಅಲ್ ಅನ್ಸಾರ್ ಸಂಸ್ಥೆ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಹಾಜಿ ಅಬ್ದುಲ್ ಮಜೀದ್ ಜನತಾ, ಲತೀಫ್ ಹರ್ಲಡ್ಕ, ಹಮೀದ್ ಕುತ್ತಮೊಟ್ಟೆ, ಶಾಫಿ ಕುತ್ತಮೊಟ್ಟೆ,ನ. ಪಂ ಸದಸ್ಯರುಗಳಾದ ಕೆ ಎಸ್ ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೋ, ಹಾಜಿ ಅಬ್ದುಲ್ ಗಫೂರ್,ಆಡಳಿತ ಸಮಿತಿ ಸದಸ್ಯರುಗಳು ಮೊದಲಾದವರು ಉಪಸ್ಥಿತರಿದ್ದರು.
ಮುಅಲ್ಲಿಮ್ ಇರ್ಫಾನ್ ಸಖಾಫಿ ಸ್ವಾಗತಿಸಿ ಅಬೂಬಕ್ಕರ್ ಸಖಾಫಿ ವಂದಿಸಿದರು. ರಿಹಾನ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.










