ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾದಿಗಳ ಬಳಗದವರಿಂದ ಸುಳ್ಯ ತಾಲೂಕಿನಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡನೆ ಮತ್ತು ಹಕ್ಕೋತ್ತಾಯದ ಬೃಹತ್ ಸಭೆಯನ್ನು ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡ ಸಭಾ ಭವನ ಅಮರ ಶ್ರೀ ಭಾಗ್ ಸುಳ್ಯದಲ್ಲಿ ನಡೆಯುವ ಪೂರ್ವ ತಯಾರಿ ಸಭೆಯು ಸೆ. 4 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಾ
ರ್ಯಕ್ರಮದ ಅಧ್ಯಕ್ಷತೆ ಯನ್ನು ಸುಳ್ಯ ತಾಲ್ಲೂಕು ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ರಾಜೀವಿ ರೈ. ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಶುಭ ಹಾರೈಸಿದರು.
ಐವರ್ನಾಡು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಹಾಗೂ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್ ಮನ್ಮಥ ಕಾರ್ಯಕ್ರಮದ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.









ಜಾಲ್ಸುರು ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯಾದ ಭಾಸ್ಕರ ಅಡ್ಕಾರ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಇದರ ಸತ್ಯ ಬೇರೆಯೇ ಇದೆ ಎಂಬುದರ ಬಗ್ಗೆ ಮಾತನಾಡಿ ಸೌಜನ್ಯ ಹತ್ಯೆ ಪ್ರಕರಣದ ಬಗ್ಗೆ ಮತ್ತು ಸಿಬಿಐ ತನಿಖೆಯ ಬಗ್ಗೆ ವಿವರಿಸಿದರು. ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ ಪೂಜ್ಯರು ಕ್ಷೇತ್ರದ ಮೂಲಕ ಅನೇಕ ರೀತಿಯ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿರುತ್ತಾರೆ. ಪೂಜ್ಯರ ಈ ಕಾರ್ಯಕ್ರಮವು ಇಡೀ ಜಗತ್ ಜಾಹಿರವಾಗಿದೆ. ಆದರೆ ಇದೀಗ 13 ವರ್ಷಗಳಿಂದ ಪೂಜ್ಯರ ಮೇಲೆ ಕೆಲವು ಅಧರ್ಮಿಗಳು ಅವಹೇಳನಕಾರಿ ಮಾತುಗಳನ್ನು ಹೇಳುತ್ತಾ ಬರುತ್ತಿದ್ದು, ಮುಂದಕ್ಕೆ ಇಂತಹ ದುಷ್ಟ ಶಕ್ತಿಗಳನ್ನು ನಾವು ತಡೆಯದಿದ್ದರೆ ಮುಂದೊಂದು ದಿನ ನಮ್ಮ ಹಿಂದೂ ಸಮಾಜಕ್ಕೆ ಕಂಟಕವಾಗುತ್ತದೆ.
ಆದುದರಿಂದ ನಮ್ಮ ಧರ್ಮ ಕ್ಷೇತ್ರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಇದಕ್ಕಾಗಿ ಕ್ಷೇತ್ರದ ಪರವಾಗಿ ಪೂಜ್ಯರ ಪರವಾಗಿ ನಾವು ಎದ್ದು ನಿಲ್ಲಬೇಕು ಎಂದು ತಿಳಿಸಿದರು.

ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ನಿಕಟಪೂರ್ವ ಟ್ರಷ್ಟಿ ಗ ಪಿ. ಜಿ.ಎಸ್ .ಎನ್ ಪ್ರಸಾದ್ ಬಾಳಿಲ, ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಬೆಳ್ಳಾರೆ ಇದರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್, ಸುಳ್ಯ ತಾಲ್ಲೂಕು ಜನಜಾಗೃತಿ ವೇದಿಕೆ ಬೆಳ್ಳಾರೆ ವಲಯದ ವಲಯಾಧ್ಯಕ್ಷ ಆನಂದ ಗೌಡ ಪೆರಿಯಾಣ, ಸುಳ್ಯ ತಾಲ್ಲೂಕು ಕೇಂದ್ರ ಒಕ್ಕೂಟದ ಕೋಶಾಧಿಕಾರಿ ಹಾಗೂ ಬೆಳ್ಳಾರೆ ವಲಯ ಒಕ್ಕೂಟಗಳ ವಲಯಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಬೆಳ್ಳಾರೆಯ ಅಧ್ಯಕ್ಷ ಪ್ರಮೋದ್ ರೈ, ಸುಳ್ಯ ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯ ನವೀನ್ ಕುಮಾರ್ ಸಾರಕೆರೆ,
ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಭಜನಾ ಪರಿಷತ್ ಪದಾಧಿಕಾರಿಗಳು, ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ದಿವ್ಯ ಎಲ್ಲರನ್ನು ಸ್ವಾಗತಿಸಿ, ಶ್ರೀಮತಿ ಮೀನಾಕ್ಷಿ ವಂದಿಸಿದರು. ವಲಯದ ಮೇಲ್ವಿಚಾರಕ ತೀರ್ಥರಾಮ ಕಾರ್ಯಕ್ರಮದ ನಿರ್ವಹಣೆ ಮಾಡಿದರು.










