✍️ ರಶ್ಮಿ ಗೌಡ
ಪೀಚೆ ಮನೆ ಪೆರಾಜೆ.
ಭೂಮಿಯ ಮೇಲೆ ನಾವು ಹಲವಾರು ಯುಗಯುಗಗಳನ್ನು ದಾಟಿ ಬಂದಿರುವದರ ಜೊತೆ, ಅನುಭವವನ್ನು ಕೇಳಿ, ನೋಡಿ, ಬದಲಾವಣೆಯ ಜೊತೆ ಬಂದಿರುತ್ತೆವೆ. ಇದು ಈ ಜಗದ ನಿಯಮ. ಆದರೆ ಶಿಕ್ಷಣ ಮತ್ತು ಅದನ್ನು ನೀಡುವ ಗುರುವಿನ ಸ್ಥಾನ ಎಂದಿಗೂ ಬದಲಾಗಿಲ್ಲ.. ಬದಲಾಗುವುದಿಲ್ಲ… ಶ್ರೀ ಕೃಷ್ಣನ ಕಾಲದಲ್ಲಿ, ರಾಜರ ಆಳ್ವಿಕೆಯಲ್ಲಿ, ಹೀಗೆ ಎಲ್ಲಾ ಯುಗದಲ್ಲೂ ಶಿಕ್ಷಣ ಮತ್ತೆ ಅದನ್ನು ನೀಡುವ ಗುರುವಿಗೆ ಕಾಲಕ್ಕೆ ತಕ್ಕಂತೆ ಇದ್ದ ಮನ್ನಣೆಯನ್ನು ಪುರಾಣಗಲ್ಲಿ, ಪುಸ್ತಕದಲ್ಲಿ ಓದಿದೇವೆ.
ಗುರು ಎಂದರೆ ವ್ಯಕ್ತಿಯಲ್ಲ, ಒಬ್ಬ ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು, ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು.
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತಂತ್ರಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮೂಡುಪಾಗಿಟ್ಟ ಡಾ || ಸರ್ವೇಪಲ್ಲಿ ರಾಧಾಕೃಷ್ಣನ್ ಇವರು ಭಾರತೀಯರ ಮನಸಲ್ಲಿ ಅಚ್ಚಳಿಯದ ಗುರುತಾಗಿದರೆ. ಇವರು ಶ್ರೇಷ್ಠ ಶಿಕ್ಷಣ ತಜ್ಞಾರಾಗಿದ್ದು, ತಾವು ಮಾಡಿದ ಶಿಕ್ಷಕ ವೃತ್ತಿಗೆ ಗೌರವ ಸಲ್ಲಿಸುವ ಕಾರಣಕ್ಕಾಗಿ, ತಮ್ಮ ಹುಟ್ಟಿದ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಿದರು. ಆ ದಿನ ಸೆಪ್ಟೆಂಬರ್ 05.









ಜೀವನದಲ್ಲಿ ಇಸಬೇಕು, ಇದ್ದು ಜಯಿಸಬೇಕು. ಇದಕ್ಕೆ ಶಿಕ್ಷಕರ ಮಾರ್ಗದರ್ಶನ ಬೇಕೇ ಬೇಕು. ಹಾಗಾದರೆ ಶಿಕ್ಷಕ ಅಂದ್ರೆ ಯಾರು?! ಶಿಕ್ಷಕ ಎಂದರೆ ತನ್ನಲಿರುವ ಜ್ಞಾನಭಂಡಾರವನ್ನು ಯಾವುದೇ ಸ್ವಾರ್ಥ ಮನೋಭಾವ ಇಲ್ಲದೆ ವಿದ್ಯಾರ್ಥಿಗೆ ಧಾರೆ ಎಳೆಯುತ್ತಾ, ಒಂದು ಉತ್ತಮ ಜ್ಞಾನಿಯನ್ನಾಗಿ ಮಾಡುವವರು. ಶಿಸ್ತಿನ ಶಿಪಾಯಿಯಂತೆ ವಿದ್ಯಾರ್ಥಿಯ ಜ್ಞಾನದಾಹಕ್ಕೆ ತಕ್ಕಂತೆ, ಕ್ಷಣ ಕ್ಷಣಕ್ಕೂ ಉಲ್ಲಾಸ ಬರೀತನಾಗಿ, ಕಠಿಣವಾದದ್ದನ್ನು ಸುಲಭಿಕರಿಸಿ, ಮುಗ್ದ ಮನಸಿನ ಮಗುವಿಗೆ ಜ್ಞಾನ ದೇಗುಲವನ್ನು ಪಟೀಸುವವನೆ ಒಬ್ಬ ಶಿಕ್ಷಕ.
ಶಿಕ್ಷಣ ಮತ್ತು ಅದನ್ನು ನೀಡುವ ಶಿಕ್ಷಕರ ಸ್ಥಾನ ಬದಲಾಗಿಲ್ಲ ಹೌದು!! ಆದರೆ ರೀತಿ ನೀತಿ ಯ ಬದಲಾವಣೆ, ತಂತ್ರಜ್ಞಾಗಳ ಮುಂದುವರಿಯುವಿಕೆ, ಕಲಿಕೆಯ ವೇಗ, ಹೀಗೆ ಅದೆಷ್ಟೋ ಬದಲಾವಣೆಯ ಜೊತೆ ವಿಷೇಶವಾದ ಅಭಿವೃದ್ಧಿ, ಅನ್ವೇಷಣೆಯ ವಿಜ್ಞಾನ ತಂತ್ರಜ್ಞಾನ, ವೈದ್ಯಕೀಯ ಶೋಧನೆ ಎಲ್ಲವೂ ಮನುಕುಲಕ್ಕೆ ತಕ್ಕಂತೆ ನಿರ್ಮಾಣವಾಗುತ್ತಿದೆ. ಇದಕ್ಕೆಲ್ಲಾ ಮೂಲ ಶಿಕ್ಷಣ ಮತ್ತು ಅದನ್ನು ನೀಡುವ ಗುರು. ಲಾಯರ್ ಇಲ್ಲದಿದ್ದರೆ ನ್ಯಾಯವಿಲ್ಲ, ಡಾಕ್ಟರ್ ಇಲ್ಲಾದರೆ ಆರೋಗ್ಯವಿಲ್ಲಾ, ಪೋಲೀಸ್ ಇಲ್ಲದಿದ್ದರೆ ಭದ್ರತೆ ಇಲ್ಲ. ಆದರೆ ಶಿಕ್ಷಕ ಇಲ್ಲದಿದ್ದರೆ ಮೇಲಿನ ಯಾರು ಇಲ್ಲ. ವಿದ್ಯಾರ್ಥಿಗಳನ್ನು ಭವಿಷ್ಯದ ಪ್ರಜೆಗಳನ್ನಾಗಿ ನಿರ್ಮಿಸುವ ಶಿಕ್ಷಕರಿಗೆ ನಾವು ನೀಡುವ , ಪದಕ, ಪ್ರಶಸ್ತಿ ಪತ್ರ ಯಾವುದು ಸರಿಸಾಟಿಯಲ್ಲ. ಶಿಕ್ಷಕ ವೃತ್ತಿ ಎನ್ನುವುದು ಸಾಟಿಯಿಲ್ಲದ ಪರಿಶ್ರಮ.
ತಂದೆ ತಾಯಿ ಹೆತ್ತು ಹೊತ್ತು, ಬೆಳೆಸಿ ಹೊಟ್ಟೆಗೆ ಬಟ್ಟೆಗೆ ಕಷ್ಟ ಇಲ್ಲದಂತೆ ನೋಡುತ್ತಾರೆ, ಸಲಹುತ್ತಾರೆ. ಪ್ರೀತಿ ಗೆ ಎಲ್ಲಿಯೂ ಕೊರತೆ ಇರೋದಿಲ್ಲ. ಕೊನೆಗೆ ವಿದ್ಯೆಗಾಗಿ ಗುರುವಿನ ಮಡಿಲಿಗೆ ಹಾಕುತ್ತಾರೆ. ಅಲ್ಲಿ ಗುರು ದೀಪದಂತೆ ಉರಿದು ಮಗುವನ್ನು ನಂದಾದೀಪದಂತೆ ಜ್ಞಾನದಲ್ಲಿ ಉರಿಸಿ ಹಾರೈಸಿ ಸಂತೋಸಪಡುತ್ತಾರೆ. ಗುರು ಕೇವಲ ಶಿಕ್ಷಣ ನೀಡದೇ ಒಂದು ನಿರ್ದಿಷ್ಟ ಗುರಿ ಸೃಷ್ಟಿಸಿ, ಸಾಧಿಸಲು ಮಾರ್ಗದರ್ಶನ ನೀಡುತ್ತಾ, ಜೀವನದ ಪಾಠದ ಜೊತೆ, ನೈತಿಕತೆ, ಸಂಸ್ಕೃತಿ, ಆಚಾರ ವಿಚಾರ ಎಲ್ಲವನ್ನು ಮಗುವಿನ ಜೀವನದಲ್ಲಿ ಬಿತ್ತಿ, ನಿರ್ದಿಷ್ಟ ಆಕಾರವನ್ನು ನೀಡುವವರು ಎಂದು ಹೇಳಿದರೆ ತಪ್ಪಾಗಲಾರದು.
ಗುರಿವಿನ ಪ್ರಾಮುಖ್ಯತೆ ಬಗ್ಗೆ ಶಾಸ್ತ್ರಗಳಲ್ಲಿ ಹೀಗೆಂದು ಹೇಳಲಾಗಿದೇ. ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಂ, ಗುರು ಸಾಕ್ಷಾತ್ ಪರಂ ಬ್ರಹ್ಮ, ತಸ್ಮೈ ಶ್ರೀ ಗುರುವೇ ನಮ:
ಗುರುವು ತ್ರಿಮೂತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನ ರೂಪವಾಗಿದೆ. ಜೀವನದ ಸತ್ಯಗಳ ಬಗ್ಗೆ ಅರಿವು ಮೂಡಿಸುವ ಜ್ಞಾನವನ್ನು ಕಲಿಸುವ ಭಗವಾನ್ ಬ್ರಹ್ಮನಂತೆ ಗುರು, ಸೃಷ್ಟಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಭಗವಾನ್ ವಿಷ್ಣುವಿನಂತೆ ಸಂರಕ್ಷಕ, ಮನಸ್ಸಿನಿಂದ ಅಜ್ಞಾನವನ್ನು ಹೋಗಲಾಡಿಸಲು ಸಹಾಯ ಮಾಡುವ ಭಗವಾನ್ ಶಿವಾನಂತೆ ಅಜ್ಞಾನದ ನಾಶಕ ಗುರು ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಕತ್ತಲಿನಿಂದ ಕುರುಡಗಿದವನ್ನ ಕಣ್ಣನು ಜ್ಞಾನವೆಂಬ ದೀಪದಿಂದ ಉರಿಸಿ, ನಿರ್ಮಲವಾದ ಶ್ರೇಷ್ಠ ಜ್ಞಾನವನ್ನು ಭೋದಿಸಿ, ಸೃಷ್ಟಿಕರ್ತನ ಲೀಲೆಯಂತೆ ಒಂದು ಉತ್ತಮ ರಾಷ್ಟದ ಪ್ರಜೆಯನ್ನಾಗಿ ಮಾಡುವ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭ ನಮನಗಳು…










