ನಾರ್ಣಕಜೆಯಲ್ಲಿ ಸ್ಸಾರಿಗೆ ಗೊಂಡೆ ಹಾಕುವುದು, ಕಿವಿಯೋಲೆ ತಯಾರಿ, ಕೈ ಬಳೆ ತಯಾರಿಸುವ ಬಗ್ಗೆ ಉಚಿತ ತರಬೇತಿ ಉದ್ಘಾಟನೆ

0

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು : ಶ್ರೀಮತಿ ಲತಾಶ್ರೀ ಮೋಂಟಡ್ಕ

ಮನೆಯಲ್ಲಿಯೇ ತಯಾರಿಸುವ ವಸ್ತುಗಳಿಗೂ ಆನ್ ಲೈನ್ ನಲ್ಲಿ ಸಾಕಷ್ಟು ಬೇಡಿಕೆ ಇದೆ : ಜ್ಯೋತಿರಾಜ್

ಮಹಿಳೆಯರು ಸ್ವಾವಲಂಬಿಯಾಗಲು ಇಂತಹ ಶಿಬಿರಗಳು ಉಪಯುಕ್ತವಾಗಲಿದೆ. ಸ್ವ ಉದ್ಯೋಗದ ಮೂಲಕ ಮಹಿಳೆಯರು ಆದಾಯ ಗಳಿಸಲು ಅವಕಾಶವಿದೆ. ಗ್ರಾಮೀಣ ಭಾಗದ ಮಹಿಳೆಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಲಿದೆ ಎಂದು ಲೇಖಕಿ, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ನಿರ್ದೇಶಕಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ಹೇಳಿದರು.
ಅವರು ನಾರ್ಣಕಜೆಯಲ್ಲಿ ನಡೆದ
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಎಲ್ಲಾ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ಸ್ಸಾರಿಗೆ ಗೊಂಡೆ ಹಾಕುವುದು, ಕಿವಿಯೋಲೆ ತಯಾರಿ, ಕೈ ಬಳೆ ತಯಾರಿಸುವ ಬಗ್ಗೆ ಉಚಿತ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ನೆಲೆ ಯಲ್ಲಿ ಮಾತನಾಡಿದರು.

ಕಾರ್ಯಕ್ರಮವು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ವಿಜಯ ಗ್ರಾಮೀಣಭಿವೃದ್ಧಿ ಪ್ರತಿಷ್ಟನಾ ಮಂಗಳೂರು ಇದರ ಸಿಇಒ ಜ್ಯೋತಿರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮನೆಯಲ್ಲಿ ತಯಾರಿಸುವ ವಸ್ತುಗಳಿಗೂ ಸಾಕಷ್ಟು ಬೇಡಿಕೆಯಿದೆ. ಹೀಗಾಗಿ ಸ್ವ ಉದ್ಯೋಗ ಮಾಡಿಕೊಂಡು ಆನ್ ಲೈನ್ ನಲ್ಲಿ ಮಾರಾಟ ಮಾಡಬಹುದು. ಆದರೆ ನೀವು ಜನರ ಬೇಡಿಕೆಗೆ ಬೇಕಾಗುವುವಂತಹ ಪ್ರಾಡಕ್ಟ್ ತಯಾರಿ ನಿಮ್ಮಿಂದ ಆಗಬೇಕು. ಅದಕ್ಕೆ ಒಂದೆರಡು ದಿನದ ಶಿಬಿರ ಸಾಕಾಗುವುದಿಲ್ಲ ಎಂದೇನಿಸುತ್ತದೆ. ಇದು ಬೇಸಿಕ್ ತರಬೇತಿ ಸಿಗಬಹುದಷ್ಟೇ. ಇನ್ನಷ್ಟು ತರಬೇತಿ ಬೇಕೆಂದರು ಕೊಡುವ ವ್ಯವಸ್ಥೆ ಮಾಡುತ್ತೇವೆ. ನೀವು ಸ್ವಾವಲಂಬಿಗಾಗುವುದು ನಮ್ಮ ಉದ್ದೇಶ ಎಂದರು.

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಧನಂಜಯ ಕುಮಾರ್ ಕೋಟೆಮಲೆ ಮಾತನಾಡಿ ಇಂತಹ ತರಬೇತಿಗಳು mಮಹಿಳೆಯರಿಗೆ ಉಪಯೋಗವಾಗಲಿ ಎಂದರು.

ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ದ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಕೊರತೋಡಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ನೆಲ್ಲೂರು ಕೆಮ್ರಾಜೆ ಪಿಡಿಒ ಧನಪತಿ, ಗ್ರಾ. ಪಂ. ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಶೀಲಾವತಿ ಬೊಳ್ಳಜೆ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ರಾಜೇಶ್ವರಿ ಶುಭಕರ್ ವೇದಿಕೆಯಲ್ಲಿ, ಬ್ಯಾಂಕ್ ಆಫ್ ಬರೋಡ ದೊಡ್ಡತೋಟ ಶಾಖೆಯ ವ್ಯವಸ್ಥಾಪಕ ಅನಂತ ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.